×
Ad

ನೋಟುಗಳ ಅಮೌಲ್ಯೀಕರಣ ಪರಿಣಾಮ:ಕಲ್ಯಾಣಪು ಕಾಲೇಜಿನಲ್ಲಿ ವಿಚಾರಗೋಷ್ಠಿ

Update: 2017-03-14 20:24 IST

ಕಲ್ಯಾಣಪುರ, ಮಾ.14: ಸ್ಥಳೀಯ ಮಿಲಾಗ್ರಿಸ್ ಕಾಲೇಜು ಹಾಗೂ ಮಂಗಳೂರು ಸಮಾಜಶಾಸ್ತ್ರ ಸಂಘದ ಆಶ್ರಯದಲ್ಲಿ ರಾಜ್ಯಮಟ್ಟದ ‘ನೋಟುಗಳ ಅಮೌಲ್ಯೀಕರಣದಿಂದ ಸಾಮಾಜಿಕ- ಆರ್ಥಿಕ ಜೀವನದ ಮೇಲೆ ಪರಿಣಾಮ’ ಬಗ್ಗೆ ವಿಚಾರ ಸಂಕಿರಣವೊಂದು ಮಾ.17 ರಂದು ಕಾಲೇಜಿನಲ್ಲಿ ನಡೆಯಲಿದೆ.

ವಿಚಾರ ಸಂಕಿರಣವನ್ನು ಮಂಗಳೂರು ವಿವಿ ಆರ್ಥಿಕ ಅಧಿಕಾರಿ ಹಾಗೂ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಶ್ರೀಪತಿ ಕಲ್ಲುರಾಯ ಉದ್ಘಾಟಿಸಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಮಂಗಳೂರು ಸಂತ ಎಲೋಶಿಯಸ್ ಸಂಧ್ಯಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಬೇಸಿಲ್ ಹಾನ್ಸ್ ಮುಖ್ಯ ಅತಿಥಿಗಳಾಗಿದ್ದು ಕಾಲೇಜಿನ ಸಂಚಾಲಕ ವಂ. ಸ್ಟ್ಯಾನಿ ಬಿ. ಲೋಬೊ ಅಧ್ಯಕ್ಷತೆ ವಹಿಸಲಿದ್ದಾರೆ.

 ಮಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಸಭಾಧ್ಯಕ್ಷ ಡಾ.ವಿನಯ್ ರಜತ್ ಹಾಗೂ ಕಾಲೇಜಿನ ಕ್ಯಾಂಪಸ್ ಡೈರೆಕ್ಟರ್ ವಂ. ಡಾ. ಪ್ರಕಾಶ್ ಅನಿಲ್ ಕ್ಯಾಸ್ತಲಿನೊ ಗೌರವ ಅತಿಥಿಗಳಾಗಿರುವರು. ಈ ಸಂದರ್ಭದಲ್ಲಿ ಮಂಗಳೂರು ಸಮಾಜಶಾಸ್ತ್ರ ಸಂಘದ ಸದಸ್ಯರಾದ ಡಾ. ರಿಚರ್ಡ್ ಪಾಯಸ್, ಡಾ. ವಿನಯ್ ರಜತ್ ಹಾಗೂ ಸುಜಾತ ಶೆಟ್ಟಿ ಪೆರಿಂಜೆ ಇವರನ್ನು ಸನ್ಮಾನಿಸಲಾಗುವುದು.

ಸಮಾರೋಪ ಕಾರ್ಯಕ್ರಮವು ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ. ಜೆರಾಲ್ಡ್ ಪಿಂಟೊ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ರವೀಂದ್ರನಾಥ್ ರಾವ್ ಸಮಾರೋಪ ಭಾಷಣ ಮಾಡಲಿರುವರು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಜೆರಾಲ್ಡ್ ಪಿಂಟೊ ಹಾಗೂ ಮಂಗಳೂರು ಸಮಾಜಶಾಸ್ತ್ರ ಸಂಘದ ಅಧ್ಯಕ್ಷ ಪ್ರೊ. ಮೆಲ್ವಿನ್ ಸಿ.ರೇಗೋ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News