×
Ad

ನಿಯಮ ಉಲ್ಲಂಘನೆ: 5 ಬಸ್‌ಗಳ ವಶ

Update: 2017-03-14 21:27 IST

ಮಂಗಳೂರು, ಮಾ.14: ಸಂಚಾರ ಪೊಲೀಸ್ ಮತ್ತು ಆರ್‌ಟಿಓ ಅಧಿಕಾರಿಗಳು ಮಂಗಳವಾರ ಜಂಟಿ ಕಾರ್ಯಾಚರಣೆ ನಡೆಸಿ ನಿಯಮ ಉಲ್ಲಂಘಿಸಿ ಹ್ಯಾಮಿಲ್ಟನ್ ಸರ್ಕಲ್-ಸ್ಟೇಟ್‌ಬ್ಯಾಂಕ್ ಕಡೆಗೆ ಬರುತ್ತಿದ್ದ 5 ಬಸ್‌ಗಳನ್ನು ಮುಟ್ಟುಗೋಲು ಹಾಕಿದ್ದಾರೆ.

ನಿಯಮ ಬಾರಿ ಹ್ಯಾಮಿಲ್ಟನ್ ಸರ್ಕಲ್-ಸ್ಟೇಟ್‌ಬ್ಯಾಂಕ್‌ಗೆ ಬಸ್‌ಗಳು ಬರುತ್ತಿರುವ ಬಗ್ಗೆ ಅನೇಕ ದೂರುಗಳು ಬಂದಿತ್ತು. ಅಲ್ಲದೆ ಪೊಲೀಸ್ ೆನ್-ಇನ್ ಕಾರ್ಯಕ್ರಮದಲ್ಲೂ ಸಾರ್ವಜನಿಕರು ಈ ಬಗ್ಗೆ ಪ್ರಶ್ನೆ ಹಾಕುತ್ತಿದ್ದರು.

 ಅದರಂತೆ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು 55 ಬಸ್‌ಗಳನ್ನು ತಪಾಸಣೆ ನಡೆಸಿದ್ದಾರೆ. ಆ ಪೈಕಿ ಸೂಕ್ತ ದಾಖಲೆ ನೀಡದ 20 ಬಸ್‌ಗಳಿಗೆ ನೋಟಿಸ್ ನೀಡಲಾಗಿದ್ದರೆ, 5 ಬಸ್‌ಗಳನ್ನು ಮುಟ್ಟುಗೋಲು ಹಾಕಲಾಗಿದೆ.

ಕಾರ್ಯಾಚರಣೆಯಲ್ಲಿ ಟ್ರಾಫಿಕ್ ಇನ್ಸ್‌ಪೆಕ್ಟರ್‌ಗಳಾದ ಸುರೇಶ್ ಕುಮಾರ್, ಮೋಹನ್ ಕೊಟ್ಟಾರಿ, ಆರ್‌ಟಿಒ ಇನ್‌ಸ್ಪೆಕ್ಟರ್ ನಾಗರಾಜ್ ಭಟ್, ರವೀಂದ್ರ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News