ಜುಗಾರಿ ಆಟವಾಡುತ್ತಿದ್ದ 12 ಮಂದಿಯ ಸೆರೆ
Update: 2017-03-14 21:30 IST
ಮಂಗಳೂರು, ಮಾ.14: ನಗರದ ಕೂಳೂರು ಬಳಿ ಜುಗಾರಿ ಆಟವಾಡುತ್ತಿದ್ದ 12 ಮಂದಿಯನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತರಿಂದ 16,910 ರೂ.ನಗದು ಮತ್ತು ಆಟಕ್ಕೆ ಬಳಸಿದ ಸೊತ್ತುಗಳ ಸಹಿತ 23,210 ರೂ.ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳಾದ ಬಂಗ್ರಕೂಳೂರಿನ ದಿನೇಶ್ (42), ಕಸಬ ಬೆಂಗರೆಯ ನೌಫಾಲ್ (29), ವಹಾಬ್ (28), ಬೈಕಂಪಾಡಿ ಅಂಗರಗುಂಡಿಯ ಮೊಯ್ದಿನ್ (45), ಸುರತ್ಕಲ್‌ನ ರವಿ (27), ಕಾವೂರಿನ ಸುಲೈಮಾನ್ (38), ಪುತ್ತೂರು ಕೊಡಪ್ಪಾಡಿಯ ಯತೀಶ್ (27), ಬಂಗ್ರ ಕೂಳೂರಿನ ಲಾಯಿಡ್ (42), ಯತೀಶ್ (24), ದಿಲೀಪ್ ಡಿಸೋಜ (47), ಪಂಜಿಮೊಗರಿನ ಮಿಥುನ್ (37), ಗುರುಪುರ ಸುಜಯ ಶೆಟ್ಟಿ ಎಂಬವರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಮುಂದಿನ ತನಿಖೆಗಾಗಿ ಕಾವೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.