ಡಮಾಸ್ಕಸ್ ನೀರು ಪೂರೈಕೆ ಮೇಲೆ ಅಸದ್ ಸರಕಾರದ ದಾಳಿ
Update: 2017-03-14 21:34 IST
ಜಿನೇವ, ಮಾ. 14: ರಾಜಧಾನಿ ಡಮಾಸ್ಕಸ್‌ನ ನೀರಿನ ಮೂಲಗಳ ಮೇಲೆ ಸಿರಿಯದ ವಾಯು ಪಡೆಯು ಡಿಸೆಂಬರ್‌ನಲ್ಲಿ ಬಾಂಬ್ ದಾಳಿ ನಡೆಸಿದೆ ಹಾಗೂ ಸಿರಿಯ ‘ಚಿತ್ರಹಿಂಸೆಯ ಚೇಂಬರ್’ ಆಗಿದೆ ಎಂಬುದಾಗಿ ವಿಶ್ವಸಂಸ್ಥೆ ಮಂಗಳವಾರ ಆರೋಪಿಸಿದೆ.
ನೀರಿನ ಮೂಲಗಳ ಮೇಲೆ ಉದ್ದೇಶಪೂರ್ವಕವಾಗಿ ಬಾಂಬ್ ಹಾಕಲಾಗಿದ್ದು, ನಗರದ 55 ಲಕ್ಷ ಜನರಿಗೆ ನೀರು ಪೂರೈಕೆ ನಿಂತು ಹೋಯಿತು ಹಾಗೂ ಇದು ಯುದ್ಧಾಪರಾಧಕ್ಕೆ ಸಮವಾಗಿದೆ ಎಂದು ವರದಿಯೊಂದರಲ್ಲಿ ವಿಶ್ವಸಂಸ್ಥೆಯ ಸಿರಿಯ ಕುರಿತ ಸ್ವತಂತ್ರ ಅಂತಾರಾಷ್ಟ್ರೀಯ ವಿಚಾರಣಾ ಆಯೋಗ ಆರೋಪಿಸಿದೆ.