ಬೈಕ್ ಅಪಘಾತ: ಸಹಸವಾರ ಮೃತ್ಯು
Update: 2017-03-14 21:39 IST
ಗಂಗೊಳ್ಳಿ, ಮಾ.14: ಹರ್ಕೂರು ಗ್ರಾಮದ ಚುಟ್ಟಿಮನೆ ಕೊಡ್ಲು ಎಂಬಲ್ಲಿ ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಸಹಸವಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಗಂಗೊಳ್ಳಿ ದಾಖುಹಿತ್ಲುವಿನ ಮಂಗಳ ಖಾರ್ವಿ(29) ಎಂದು ಗುರುತಿಸಲಾಗಿದೆ. ಸವಾರ ರಾಮ ಖಾರ್ವಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ಮಂಗಳ ಖಾರ್ವಿ ಮಾ.13ರಂದು ಮಧ್ಯಾಹ್ನ ವೇಳೆ ಆಲೂರಿನಲ್ಲಿ ಕರಾವಳಿ ಸಂಘದ ಸಭೆಯನ್ನು ಮುಗಿಸಿ ಗಂಗೊಳ್ಳಿ ಕಡೆಗೆ ರಾಮ ಖಾರ್ವಿ ಎಂಬವರ ಬೈಕಿನಲ್ಲಿ ಬರುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿಮಗುಚಿ ಬಿತ್ತೆನ್ನಲಾಗಿದೆ.
ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಂಗಳ ಖಾರ್ವಿ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.