ಕಾಂಕ್ರೀಟ್ ರಸ್ತೆ ಉದ್ಘಾಟನೆ

Update: 2017-03-14 17:11 GMT

ಬಂಟ್ವಾಳ, ಮಾ. 14: ಸುಜೀರು ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಿ ಊರಿನ ಜನತೆಗೆ ಶಾಶ್ವತವಾದ ರಸ್ತೆಯನ್ನು ನಿರ್ಮಸಿಕೊಡಲಾಗಿದೆ.

 ಜನತೆಯ ಬಹುದಿನಗಳ ಬೇಡಿಕೆ ಇದಾಗಿದ್ದು ಇಲ್ಲಿನ ವಸತಿ ಪ್ರದೇಶ, ದೈವಸ್ಥಾನ ಅಂಗನವಾಡಿಗಳಿಗೆ ಸಂಪರ್ಕಿಸುವ ರಸ್ತೆಗೆ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು ಎರಡನೇ ಹಂತದ ಕಾರ್ಯ ಶೀಘ್ರ ಆರಂಭಗೊಳ್ಳಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು.

 ಅವರು ಶನಿವಾರ ಸಂಜೆ ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 10 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ಸ್ಥಳೀಯ ಒಳ ರಸ್ತೆಗಳನ್ನು ಕೂಡ ಅಭಿವೃದ್ದಿಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗಿದ್ದು ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ಮೊದಲ ಪ್ರಾಶಸ್ತ್ಯದಲ್ಲಿ ರಸ್ತೆ ಅಭಿವೃದ್ದಿ ಪಡಿಸುವುದಾಗಿ ಅವರು ತಿಳಿಸಿದರು. ಪುದು ಗ್ರಾಮದ ಬಹುತೇಕ ಒಳ ರಸ್ತೆಗಳು ಕಾಂಕ್ರೀಟಿಕರಣಗೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ರಸ್ತೆಗಳು ಕಾಂಕ್ರೀಟಿಕರಣಗೊಳ್ಳಲಿದೆ ಎಂದು ತಿಳಿಸಿದರು.

    ಈ ಸಂದರ್ಭ ಜಿ.ಪಂ. ಮಾಜಿ ಸದಸ್ಯ ಉಮ್ಮರ್ ಫಾರೂಕ್, ಪುದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆತೀಕಾ, ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ತಾ.ಪಂ.ಸದಸ್ಯೆ ಪದ್ಮಶ್ರೀ, ಮಾಜಿ ಸದಸ್ಯ ಆಸೀಫ್ ಇಕ್ಬಾಲ್, ಉದ್ಯಮಿ ಇಸ್ಮಾಯಿಲ್ ಕೆಇಎಲ್ ವಳಚ್ಚಿಲ್, ಪಂಚಾಯಿತಿ ಸದಸ್ಯರಾದ ಅಖ್ತರ್ ಹುಸೈನ್, ರಮ್ಲಾನ್, ಇಕ್ಬಾಲ್ ಸುಜೀರ್, ದುರ್ಗೇಶ್ ಶೆಟ್ಟಿ, ಝಾಹೀರ್, ಚಂದಪ್ಪ ಅಂಚನ್, ಕಿಶೋರ್, ರಫೀಕ್ ಪೇರಿಮಾರ್, ಸೌಕತ್, ಆಸೀಫ್ ಮೇಲ್ಮನೆ, ಇಬ್ರಾಹಿಂ ಕುಂಪಣಮಜಲು, ಹುಸೈನ್, ಅಬೂಬಕ್ಕರ್ (ಬಾವಾ), ಸಲಾಂ ಮಲ್ಲಿ, ಹೈದ್ರೋಸಿ ಜುಮ್ಮಾ ಮಸೀದಿ ಉಪಾಧ್ಯಕ್ಷ ಅಬ್ದುಲ್ ಖಾದರ್ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News