ಪರಂಗಿಪೇಟೆ : ವಿಜೇತರಿಗೆ ಅಕ್ಕಿ ವಿತರಿಸುವ ವಿಶಿಷ್ಟ ರೀತಿಯ ರಿಕ್ಷಾ ಚಾಲಕರ ಕ್ರಿಕೆಟ್ ಟೂರ್ನ್ ಮೆಂಟ್

Update: 2017-03-14 17:36 GMT

ಪರಂಗಿಪೇಟೆ,ಮಾ.14: ನಂ 1 ರಿಕ್ಷಾ ಪಾರ್ಕ್ ವತಿಯಂದ ಪರವಾಣಿಗೆ ಮತ್ತು ಸಮವಸ್ತ್ರದ ಬಗ್ಗೆ ಜಾಗ್ರತಿ ಮೂಡಿಸುವ ಉದ್ದೇಶದಿಂದ ಚಾಲಕರಿಗಾಗಿ ಕ್ರಿಕೆಟ್ ಟೂರ್ನ್ ಮೆಂಟ್ ಹಮ್ಮಿಕೊಂಡು ವಿಜೇತರಿಗೆ ಬಹುಮಾನವಾಗಿ ಅಕ್ಕಿ ಮತ್ತು ಟ್ರೋಪಿ ವಿತರಿಸಲಾಯಿತು.ವಿಜೇತ ಬಿಸಿರೋಡ್ ಚಾಲಕ ತಂಡ 25 ಕೆಜಿ ಯಂತೆ 11 ಮಂದಿಗೆ ಅಕ್ಕಿ ಮತ್ತು ಪ್ರಥಮ ಟ್ರೋಪಿ ಪಡೆಯಿತು.

ದ್ವಿತೀಯ ಮೆಲ್ಕಾರ್ ರಿಕ್ಷಾ ಚಾಲಕರ ತಂಡವು ವಿಜೇತವಾಗಿ 10 ಕೆಜಿ ಯಂತೆ 11 ಮಂದಿ ಅಕ್ಕಿ ಮತ್ತು ದ್ವಿತೀಯ ಟ್ರೋಪಿ ಪಡೆದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ,  ಜಿಲ್ಲಾ ಯುವ ಕಾಂಗ್ರೆಸ್ಸ್ ಅದ್ಯಕ್ಷ ಮಿತುನ್ ರೈ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕು, ಇಂಡೇನ್ ಗ್ಯಾಸ್ ಮಾಲಕರಾದ ಜಗನ್ನಾತ್ ಚೌಟ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಸೇವಾಂಜಲಿ ಪ್ರತಿಷ್ಟಾನ ಪರಂಗಿಪೇಟೆಯ ಕ್ರಷ್ನ ಕುಮಾರ್ ಪೂಂಜ, ಅರುಣ್ ಕುಮಾರ್ ಗುತ್ತು ಬಂಟ್ವಾಳ, ಸಂತೋಷ್ ಬೋಳಿಯಾರ್, ಬಶೀರ್ ಟಿಕೆ, ಎಫ್ ಉಮರ್ ಫಾರೂಕು, ಅಜಿತ್ ಚೌಟ ದೇವಸ್ಯ, ಜಬ್ಬಾರ್ ಮಾರಿಪ್ಪಳ್ಳ,  ರಿಯಾಝ್ ಪರಂಗಿಪೇಟೆ, ಆಸೀರ್ ಪೇರಿಮಾರ್, ಕೆರೀಮ್ ವಿಎಚ್, ಸಿದ್ದೀಖ್ ಎಮ್.ಎಸ್, ಶುಕೂರು ರಾಜದಾನಿ ಜುವೆಲ್ಲರ್ಸ್, ಚಂದ್ರಶೇಕರ್ ಮೆಸ್ಕಾಮ್, ಮನೋಜ್ ಆಚಾರ್ಯ ಪುದು, ಸುಲೈಮಾನ್ ಉಸ್ತಾದ್ ಅಮ್ಮೆಮಾರ್, ರಮ್ಲಾನ್ ಮಾರಿಪ್ಪಳ್ಳ, ಆಸೀಫ್ ಮೇಲ್ಮನೆ, ಇಸ್ಮಾಯಿಲ್ ಪಾವೂರು, ಮನೋಜ್ ಸುಜೀರ್, ಉಪಸ್ಥಿತರಿದ್ದರು, ಸುಲೈಮಾನ್ ಎಮ್ ಸ್ವಾಗತಿಸಿ ಅಶ್ರಫ್ ಮಳ್ಳಿ ವಂದಿಸಿದರು.

21 ಬಡ ಕುಟುಂಬಗಳಿಗೆ ಈ ಸಂದರ್ಭದಲ್ಲಿ ಅಕ್ಕಿ ವಿತರಿಸಲಾಯಿತು.

ಈ ಕ್ರೀಡಾಕೂಟವನ್ನು ರಿಕ್ಷಾ ಚಾಲಕರಾದ ಸುಲೈಮಾನ್ ಎಮ್, ನಝೀರ್ ಕರ್ಮಾರ್, ರಶೀದ್ ಪಾವೂರು, ಜಾಫರ್ ಸುಜೀರ್ ಸಂಘಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News