ಸೊಳ್ಳೆ ಪರದೆ ವಿತರಣೆ
ಮುಲ್ಕಿ, ಮಾ.14: ರಾಜ್ಯದ ಆರೋಗ್ಯ ಇಲಾಖೆಯ ಮೂಲಕ ಮುಲ್ಕಿಯ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮೂಡಬಿದ್ರಿಯ ಆರೋಗ್ಯ ಕೇಂದ್ರಗಳ ದುರಸ್ತಿಗೆ ತಲಾ 25 ಲಕ್ಷ ರೂ. ಮತ್ತು ಮೂಡು ಶೆಡ್ಡೆಯ ಟಿಬಿ ಆಸ್ಪತ್ರೆಗೆ 30 ಲಕ್ಷ ರೂ. ಅನುದಾನ ಮಂಜೂರಾಗಿದ್ದು ಸ್ಥಳೀಯ ಪಂಚಾಯತ್ ಗಳೊಂದಿಗೆ ಚರ್ಚಿಸಿ ಅನುದಾನವನ್ನು ಸದುಪಯೋಗಗೊಳಿಸಲಾಗುವುದು ಎಂದು ಶಾಸಕ ಕೆ ಅಭಯಂಚಂದ್ರ ಜ್ಯೆನ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಮಂಗಳೂರು,ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರು-ಕೆಮ್ರಾಲ್ ಮತ್ತು ಮೂಲ್ಕಿ ನಗರ ಪಂಚಾಯತ್‌ನ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಮಲೇರಿಯಾ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಮುಲ್ಕಿಯ ಕೆ.ಎಸ್.ರಾವ್ ನಗರದ ಸಮುದಾಯ ಭವನದಲ್ಲಿ ಜರುಗಿದ ಸುಮಾರು 2500 ಮಂದಿಗೆ ಸೊಳ್ಳೆ ಪರದೆಗಳನ್ನು ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡಿದರು. ಸಮಾರಂಣಭದ ಅಧ್ಯಕ್ಷತೆಯನ್ನು ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ ವಹಿಸಿದ್ದರು. ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ ಎಂ, ಮುಖ್ಯಾಧಿಕಾರಿ ಇಂದು, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿಯ ಡಾ. ಅರುಣ್ ಕುಮಾರ್ ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ನಿರೀಕ್ಷಕ ಜಯರಾಮ ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.