ಬಿಜೆಪಿ ಮುಕ್ತ ಭಾರತ ಮತ್ತು ಯಡಿಯೂರಪ್ಪ ಮುಕ್ತ ಕರ್ನಾಟಕ ಮಾಡುವುದು ಕಾಂಗ್ರೆಸ್ ಪಕ್ಷದ ಗುರಿ :ಉಗ್ರಪ್ಪ
ಸುರತ್ಕಲ್, ಮಾ.14: ಫ್ಯಾಸಿಸ್ಟ್ ಮನಸ್ಥಿತಿಯೊಂದಿಗೆ ಜನ ಸಾಮಾನ್ಯರ ಬದುಕಿನಲ್ಲಿ ಚಲ್ಲಟವಾಡುತ್ತಾ ರಾಜಕಿಯ ಮಾಡುತ್ತಿರುವ ಪ್ರಧಾನಿ ಮೋದಿ, ಬಿಜೆಪಿ ಮುಕ್ತ ಭಾರತ ಮತ್ತು ಯಡಿಯೂರಪ್ಪ ಮುಕ್ತ ಕರ್ನಾಟಕ ಮಾಡುವುದು ಕಾಂಗ್ರೆಸ್ ಪಕ್ಷದ ಗುರಿಯಾಗಿದ್ದು, ಕಾರ್ಯಕರ್ತರು ಈ ನಿಟ್ಟಿನಲ್ಲಿ ಪಣತೊಡಬೇಕು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಉಗ್ರಪ್ಪ ಹೇಳಿದರು.
ಮಂಗಳವಾರ ಸುರತ್ಕಲ್‌ನ ಬಂಟರ ಭವನದಲ್ಲಿ ನಡೆದ ‘‘ಕಾಂಗ್ರೆಸ್ ನಡಿಗೆ ಸುರಾಜ್ಯದ ಕಡೆಗೆ ’’ ಕಾರ್ಯಕ್ರಮದ ನಿಮಿತ್ತ ಕಾರ್ಯಕರ್ತರಿಗೆ ಆಯೋಜಿಸಲಾಗಿದ್ದ ಕಾರ್ಯಾಗಾರ, ಉಪನ್ಯಾಸ, ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸುಳ್ಳುಗಳನ್ನು ಹಲವು ಬಾರಿ ಹೇಳಿ ಅದನ್ನೇ ಸತ್ಯ ಮಾಡುವ ಮೋದಿ ಸರಕಾರ, ಗುಜರಾತ್‌ನಲ್ಲಿ ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಪ್ರಕರಣಗಳನ್ನು ಮುಚ್ಚಿ ಹಾಕಿದೆ. ಕಪ್ಪುಹಣ, ಭಯೋತ್ಪಾದಕರಿಗೆ ಪಾಠಕಲಿಸುವುದು, ನಕಲಿ ನೋಟುಗಳನ್ನು ತಡೆಯುವುದು, ಭ್ರಷ್ಟಾಚಾರ ತಡೆಯ ನೆಪ ಹೇಳಿ 500, 1000 ರೂ. ಮುಖ ಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದರು. ಬಳಿಕ ಹಣ ಪಡೆಯಲು ಮಿತಿ ನಿಗದಿಪಡಿಸಿದ ಸರಕಾರ ಉತ್ತರ ಪ್ರದೆಶ ರೇರಿ ಪಂಚ ರಾಜ್ಯಗಳ ಚುನಾವಣೆಯ ಬಳಿಕ ಮಂಗಳವಾರದಿಂದ ಹಣದ ನಿಗದಿಯನ್ನು ಮುಕ್ತ ಗೊಳಿಸಿದೆ. ಇದು ಚುನಾವಣೆಯ ಗಿಮಿಕ್ ಎಂದು ನುಡಿದರು.
ಶಿವಮೊಗ್ಗದಲ್ಲಿ ಇರುವ ಖಾಲಿ ಪ್ರದೇಶಗಳು ಯಡಿಯೂರಪ್ಪ, ಈಶ್ವರಪ್ಪ ಮತ್ತು ಬಿಜೆಪಿಯ ನಾಯಕರಿಗೆ ಸೇರಿದವು ಎಂದು ಗಂಭೀರ ಆರೋಪ ಮಾಡಿದ ಅವರು, ರಾಜ್ಯದಲ್ಲಿ ಯಾವುದೇ ಹಗರಣಗಳು ನಡೆದಿಲ್ಲ. ಬಿಜೆಪಿಯ ಆರೋಪಗಳು ಕೇವಲ ರಾಜಕೀಯ ಪೂರಿ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಬಿಜೆಪಿ ಮುಕ್ತ ರಾಜ್ಯವನ್ನಾಗಿಸುವುದು ಕಾಂಗ್ರೆಸ್‌ನ ಮುಖ್ಯ ಗುರಿ ಎಂದ ಉಗ್ರಪ್ಪ, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಮತ್ತು ಯಡಿಯೂರಪ್ಪ ಮುಖ್ಯಮಂತ್ರಯಾಗುವುದು ಅಸಾಧ್ಯ. ಗೆಲುವು ಕಾಂಗ್ರೆಸ್‌ಗೆ ಮಾತ್ರ ಸೀಮಿತವಾಗಿದೆ ಎಂದರು.
ಲಕ್ಷಾಂತರ ಕೋಟಿ ರೂ. ಹಗರಣದಲ್ಲಿ ಸಿಲುಕಿ ಜೈಲಿಗೆ ಹೋಗುವ ಸಂದರ್ಭ ಮತ್ತು ಜೈಲಿನಿಂದ ಹೊರ ಬರುವ ಸಂದರ್ಭಗಳಲ್ಲಿ ‘ವಿಕ್ಟರಿ’ ಚಿಹ್ನೆ ತೋರಿಸುತ್ತಾ ನಡೆದ ಯಡಿಯೂರಪ್ಪ್ಪ ‘ಮೂರುಬಿಟ್ಟವರು’ ಎಂದು ಕಟುವಾಗಿ ಕುಟುಕಿದರು.
2008ರಿಂದ 11 ರವರೆಗೆ ಅಧಿಕಾರಿ ನಡೆಸಿದ ಯಡಿಯೂರಪ್ಪ ಅವರನ್ನು 2011ರಲ್ಲಿ ಕಿತ್ತು ಹಾಕಿದಿರಿ, ಈಗ ಮತ್ತೆ ಅವರ ಹೆಸರು ಹೇಳಿಕೊಂಡು ಚುನಾವಣೆ ಎದುರಿಸುವ ಕಾರ್ಯತಂತ್ರ ನಡೆಸಲಾಗುತ್ತಿದೆ ಎಂದ ಅವರು, ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ ಎಂದು ಆರೋಪಿಸಿದರು.
ಬಳಿಕ ಮಾತನಾಡಿದ ಆನಿವಾಸಿ ಬಾರತೀಯ ರಾಯಭಾರಿ ಸಂಸ್ಥೆಯ ಮಾಜೀ ಅಧಿಕಾರಿ, ಡಾ. ಆರತಿ ಕೃಷ್ಣ, ಅರೆಬಿಯಾ ದೆಶಗಳಲ್ಲಿ ಕಾರ್ಮಿಕರನ್ನು ಶೋಷಿಸಲಾಗುತ್ತಿದೆ. ಈ ಸಂಬಂಧ ಎಲ್ಲಾ ಅನಿವಾಸಿ ಕನ್ನಡಿಗರ ದತ್ತಾಂಶ ಸಂಗ್ರಹ ನಡೆಸಲಾಗುವುದು. ಪ್ರತೀ ಜಿಲ್ಲೆಗಲಲ್ಲಿ ಕ್ಷೇಮಾಭಿವೃದ್ಧಿ ಸಮಿತಿಯನ್ನು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗುವುದು. ಸಮಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರು ಸದಸ್ಯರಾಗಿರುತ್ತಾರೆ.
ಆನಿವಾಸಿ ಕನ್ನಡಿಗರು ತಮ್ಮ ಯಾವುದೇ ಕಷ್ಟಗಳಿಗೆ ತಹಶೀಲ್ದರ್ ಅವರನ್ನು ಸಮಪರ್ಕಸ ಬಹುದು ಎಂದರು. ಅಲ್ಲದೆ, ಗಲ್ಫ್ ದೇಶಗಳಲ್ಲಿ ಮರಣಹೊಂದುವವರ ಶವವನ್ನು ಭಾರತಕ್ಕೆ ತರಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಕೆಲಸಗಳನ್ನು ಈ ಸಮಿತಿ ನೋಡಿಕೊಲ್ಳಿದ್ದು, ಅದಕ್ಕಾಗಿ ವಿಶೇಷ ಧನ ಸಹಾಯವನ್ನು ನೀಡಲಿದೆ ಎಮದರು.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉದ್ಘಾಟಿಸಿದರು. ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಐವನ್ ಡಿಸೋಜಾ, ಮೇಯತ್ ಕವಿತಾ ಸನಿಲ್, ನಾಗಲಕ್ಷ್ಮೀ, ರಜನೀಶ್, ಬಿ.ಎಚ್. ಖಾದರ್, ಕಣಚೂರು ಮೋನು, ಇಬ್ರಾಹೀಂ ಕೋಡಿಜಾಲ್, ವಿಜಯ ಕುಮಾರ್, ಪ್ರಥ್ವಿರಾಜ್ , ಹರಿನಾಥ್, ಸಾಹುಲ್ ಹಮಿದ್, ಪೂರ್ಣಿಮಾ ಗಣೇಶ್, ಪುರುಶೋತ್ತಮ ಚಿತ್ರಾಪು, ಸೀಮಾ, ಗಣೇಶ್ ಪೂಜಾರಿ, ಶಕುಂತಲಾ ಕಾಮತ್, ಶಾಲೆಟ್ ಪಿಂಟೋ, ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.