ಮಾ.17ರಿಂದ ಮೈಟ್‌ನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ

Update: 2017-03-14 18:32 GMT

ಮೂಡುಬಿದಿರೆ, ಮಾ.14: ಮೂಡುಬಿದಿರೆಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್‌ಟೆಕ್ನಾಲಜಿ ಆ್ಯಂಡ್ ಇಂಜಿನಿಯರಿಂಗ್ (ಮೈಟ್) ಸಂಸ್ಥೆಯಲ್ಲಿ ಮಾ.17 ಮತ್ತು 18ರಂದು ‘ಸುಸ್ಥಿರ ಅಭಿವೃದ್ಧಿ ಮತ್ತು ಬದಲಾದ ಹವಾಮಾನ ಪರಿಸ್ಥಿತಿಯಲ್ಲಿ ಜಾಗತಿಕ ಸಿವಿಲ್ ಇಂಜಿನಿಯರಿಂಗ್‌ನ ಸವಾಲುಗಳು’ ಎಂಬ ವಿಷಯದ ಕುರಿತು 2ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. 

ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಹೈದರಾಬಾದ್‌ನ ಕೆಪೆಟ್-ಇನ್ನೊವಾ ಟೆಕ್ನಿಕಲ್ ಸೊಸೈಟಿಯ ಮೈಟ್ ಘಟಕದ ಸಹಯೋಗದಲ್ಲಿ ಏರ್ಪಡಿಸಲಾಗಿರುವ ಈ ಸಮ್ಮೇಳನದಲ್ಲಿ ಜಪಾನ್, ಸ್ಪೈನ್, ಬಾಂಗ್ಲಾದೇಶ ಮತ್ತು ಭಾರತದ ಪ್ರಮುಖ ಸಂಸ್ಥೆಗಳು ಹಾಗೂ ಕೈಗಾರಿಕೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ನೂರಕ್ಕೂ ಮಿಕ್ಕಿ ಪ್ರಬಂಧಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 76 ಪ್ರಬಂಧಗಳು ಸಮ್ಮೇಳನದಲ್ಲಿ ಮಂಡಿಸಲು ಆಯ್ಕೆಯಾಗಿವೆ. ಜಪಾನಿನ ಕುಮಮೊಟೊ ವಿಶ್ವವಿದ್ಯಾನಿಲಯದ ಡಾ. ಶುಯಿಚಿ ತೊರ್ಜಿ, ಸ್ಪೈನ್‌ನ ಸೆವಿಲ್ ವಿಶ್ವವಿದ್ಯಾನಿಲಯದ ಐಐಆರ್‌ಎಸ್‌ಪಿ ನಿರ್ದೇಶಕ ಡಾ. ಪಾಲೊಮಾ ಪಿನೆದಾ ಅವರು ಮುಖ್ಯ ಭಾಷಣ ಮಾಡುವರು. ರಾಜಲಕ್ಷಿ್ಮೀ ಎಜುಕೇಶನ್ ಟ್ರಸ್ಟ್‌ನ ಸ್ಥಾಪಕ ಹಾಗೂ ಅಧ್ಯಕ್ಷ ರಾಜೇಶ್ ಚೌಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News