ಮಾ.20: ಬಾರಕೂರು ಇತಿಹಾಸ ಸಂಶೋಧನಾ ಕೃತಿ ಬಿಡುಗಡೆ

Update: 2017-03-14 18:34 GMT

ಉಡುಪಿ, ಮಾ.14: ಶಾಸನ ಸಂಶೋಧಕ ದಿ. ಡಾ.ಬಿ. ವಸಂತ ಶೆಟ್ಟಿ ಅವರ ಸಂಶೋಧನಾ ಪ್ರಬಂಧ ‘ಬಾರಕೂರು: ಎ ಮೆಟ್ರೋಪೊಲಿಟಿನ್ ಸಿಟಿ ಆಫ್ ಆಂಟಿಕ್ವಿಟಿ, ಇಟ್ಸ್ ಹಿಸ್ಟರಿ ಎಂಡ್ ಕಲ್ಚರ್’ ಕೃತಿಯ ಅನಾವರಣ ಮಾ.20ರಂದು ಅಪರಾಹ್ನ 3:30ಕ್ಕೆ ಬ್ರಹ್ಮಾವರ ಎಸ್.ಎಂ.ಎಸ್. ಕಾಲೇಜಿನಲ್ಲಿ ನಡೆಯಲಿದೆ. 

ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಪ್ರಕಟಿಸಿರುವ ಈ ಕೃತಿ ಯನ್ನು ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲಿನ ಪ್ರಾಂಶುಪಾಲ ಪ್ರೊ. ಮ್ಯಾಥ್ಯೂ ಸಿ. ನೈನಾನ್ ಅನಾವರಣಗೊಳಿಸಲಿದ್ದಾರೆ. ಡಾ.ಪಿ. ಗಣಪತಿ ಭಟ್ ಕೃತಿ ಪರಿಚಯ ಮಾಡಲಿದ್ದಾರೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತುಳು ಸಾಹಿತ್ಯ ಅಕಾ ಡೆಮಿಯ ಮಾಜಿ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಚಂದ್ರಹಾಸ ರೈ ಆಗಮಿಸಲಿದ್ದಾರೆ. ಪ್ರೊ. ಸುಶೀಲಾ ಆರ್. ರೈ ಅಧ್ಯಕ್ಷತೆ ವಹಿಸ ಲಿದ್ದಾರೆ ಎಂದು ಬಿ.ವಸಂತ ಶೆಟ್ಟಿ ಸ್ಮಾರಕ ಇತಿಹಾಸ ಅಧ್ಯಯನ ಕೇಂದ್ರವು ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News