ಕರ್ನಾಟಕ ಬಜೆಟ್-2017: ಮಂಗಳೂರು ಕಾರಾಗೃಹದ ಅವ್ಯವಸ್ಥೆಗೆ ಸಿಕ್ಕಿಲ್ಲ ಮುಕ್ತಿ!:
ಮಂಗಳೂರು, ಮಾ.15: ಮಂಗಳೂರಿನ ಕೇಂದ್ರ ಕಾರಾಗೃಹವು ನಗರದ ಜನನಿಬಿಡ ಪ್ರದೇಶದ ನಡುವೆಯೇ ಇರುವುದಲ್ಲದೆ, ಕಾರಾಗೃಹದಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಕೈದಿಗಳನ್ನು ಕೂಡಿಹಾಕಿರುವುದಲ್ಲದೆ, ಹಲವಾರು ಅಕ್ರಮಗಳಿಗೆ ಪದೇ ಪದೇ ಕಾರಣವಾಗುತ್ತಿದೆ.
ಮಂಗಳೂರಿನ ಪ್ರಸಕ್ತ ಕೇಂದ್ರ ಕಾರಾಗೃಹದ ಅವ್ಯವಸ್ಥೆಯಿಂದಾಗಿ ಅಲ್ಲಿ ಆಗಾಗ್ಗೆ ಕೈದಿಗಳ ನಡುವೆ ಘರ್ಷಣೆಯ ಜತೆಗೆ, ಕಾರಾಗೃಹ ಸಿಬ್ಬಂದಿಗಳ ಮೇಲೆ ಹಲ್ಲೆ, ಕೈದಿ ಪರಾರಿಯಂತಹ ಪ್ರಕರಣಗಳೂ ದಾಖಲಾಗಿವೆ.
ಕಾರಾಗೃಹವನ್ನು ಮುಡಿಪುಗೆ ಸ್ಥಳಾಂತರಿಸುವ ಪ್ರಸ್ತಾಪ ಕಳೆದ ಬಜೆಟ್‌ನಲ್ಲಿತ್ತು. ಆದರೆ ಈ ಬಾರಿ ಬಜೆಟ್‌ನಲ್ಲಿಯೂ ಅದಕ್ಕೆ ಅನುದಾನ ಮೀಸಲಿಡಲಾಗಿಲ್ಲ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆಗಾಗಿ 286 ಎಕರೆ ಭೂಸ್ವಾಧೀನಕ್ಕಾಗಿ ಭಾರತ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವಿಸ್ತರಣಾ ಕಾರ್ಯಕ್ಕೆ ರಾಜ್ಯ ಸರಕಾರವು ಅಗತ್ಯ ಸೌಲಭ್ಯವನ್ನು ಕಲ್ಪಿಸಲಿದೆ ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಿರುವದನ್ನು ಬಿಟ್ಟರೆ, ಯಾವುದೇ ಅನುದಾನವನ್ನು ಮೀಸಲಿಡಲಾಗಿಲ್ಲ.