×
Ad

ಬೆಳ್ತಂಗಡಿ ತಾಲೂಕಿನಾದ್ಯಂತ ಮಳೆ; ಉಜಿರೆಯಲ್ಲಿ ಬಸ್ ಮೇಲೆ ಉರುಳಿದ ಮರ

Update: 2017-03-15 19:22 IST

ಬೆಳ್ತಂಗಡಿ, ಮಾ.15:ತಾಲೂಕಿನಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ಉಜಿರೆಯಲ್ಲಿ ಬಸ್ ಮೇಲೆ ಮರ ಉರುಳಿಬಿದ್ದದೆ. ಪ್ರಯಾಣಿಕರಿಗೆ ಯಾವುದೇ ವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಕೆಲವೆಡೆ ಗಾಳಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ, ದೂರವಾಣಿಗಳು ಅಸ್ತವ್ಯಸ್ತಗೊಂಡಿದೆ. ಬುಧವಾರ ಮಧ್ಯಾಹ್ನ ಧರ್ಮಸ್ಥಳ, ಗುರುವಾಯನಕೆರೆ, ಉಜಿರೆ, ಮುಂಡಾಜೆ, ಗೇರುಕಟ್ಟೆ ಭಾರೀ ಮಳೆಯಯಾಗಿದೆ. ಬೆಳ್ತಂಗಡಿ, ಮದ್ದಡ್ಕ ಸಾಧಾರಣ ಮಳೆಯಾಗಿದ್ದು, ಉಳಿದೆಡೆ ಮೋಡ ವಾತಾವರಣ ದಿಂದ ಹನಿ ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News