ಹೃದಯ ದೇಹದ ಹೊರಗಿರುವ ಮಗು ಜನನ

Update: 2017-03-15 14:03 GMT

ಇಸ್ಲಾಮಾಬಾದ್, ಮಾ. 15: ದೇಹದ ಹೊರಗೆ ಹೃದಯ ಹೊಂದಿರುವ ಮಗುವೊಂದು ಪಾಕಿಸ್ತಾನದ ಮುಲ್ತಾನ್ ನಗರದಲ್ಲಿ ಮಂಗಳವಾರ ಜನಿಸಿದೆ. ಮುಲ್ತಾನ್‌ನಲ್ಲಿ ಸೂಕ್ತ ವೈದ್ಯಕೀಯ ಸೌಕರ್ಯಗಳ ಕೊರತೆಯ ಹಿನ್ನೆಲೆಯಲ್ಲಿ, ಮಗುವನ್ನು ಬಳಿಕ ಲಾಹೋರ್‌ನ ಮಕ್ಕಳ ಆಸ್ಪತ್ರೆಗೆ ತರಲಾಯಿತು.

ಮಗುವಿನ ಹೃದಯ ಸರಿಯಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ ವೈದ್ಯರು, ಆದರೆ, ಅದನ್ನು ದೇಹದ ಒಳಗೆ ಸೇರಿಸಲು ಶಸ್ತ್ರಚಿಕಿತ್ಸೆಯೊಂದನ್ನು ಮಾಡಬೇಕಾಗುತ್ತದೆ ಎಂದಿದ್ದಾರೆ ಎಂದು ‘ಜಿಯೋ ನ್ಯೂಸ್’ ವರದಿ ಮಾಡಿದೆ.

ಎಲ್ಲವೂ ಸರಿಯಾಗಿ ನಡೆದರೆ, ಮಗು ಆರೋಗ್ಯಕರ ಜೀವನ ನಡೆಸುತ್ತದೆ ಎಂದರು.ಮಗುವಿನ ತಂದೆ ಟ್ಯಾಕ್ಸಿ ಚಾಲಕರಾಗಿದ್ದು, ಅದರ ದುಬಾರಿ ಚಿಕಿತ್ಸೆಗೆ ಹಣ ಹೊಂದಿಸಲು ಅಸಮರ್ಥರಾಗಿದ್ದಾರೆ.

ಹೃದಯ ದೇಹದ ಹೊರಗಿರುವ ಮಕ್ಕಳು ಸುಮಾರು 79 ಲಕ್ಷಕ್ಕೊಬ್ಬರಂತೆ ಹುಟ್ಟುತ್ತಾರೆ.ಈ ತಿಂಗಳ ಆದಿ ಭಾಗದಲ್ಲಿ ಅಸ್ಸಾಂನ ದುಬ್ರಿ ಜಿಲ್ಲೆಯ ಫುಟ್ಕಿಬಾರಿ ಎಂಬಲ್ಲಿ ಹೃದಯ ದೇಹದ ಹೊರಗಿರುವ ಮಗುವೊಂದು ಹುಟ್ಟಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News