×
Ad

ಕರ್ನಾಟಕ ಬಜೆಟ್-2017: ಮೀನುಗಾರಿಕೆ ಕ್ಷೇತ್ರಕ್ಕೆ ಘೋಷಿಸಿದ ಯೋಜನೆಗಳು

Update: 2017-03-15 20:07 IST

ಮಂಗಳೂರು, ಮಾ.15: ಕರಾವಳಿ ಭಾಗದ ಜೀವನಾಡಿಯಾಗಿರುವ ಮೀನುಗಾರಿಕೆ ಅಭಿವೃದ್ಧಿ ಕುರಿತು ಸಿಎಂ ಸಿದ್ದರಾಮಯ್ಯ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

ಬಂದರು ಜಟ್ಟಿ ವಿಸ್ತರಣೆ:

ಮೀನುಗಾರಿಕೆ  ಮಲ್ಪೆ ಮತ್ತು ಮಂಗಳೂರು ಮೀನುಗಾರಿಕೆ ಬಂದರುಗಳಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ದೋಣಿಗಳ ಸುರಕ್ಷಿತ ಇಳಿದಾಣಕ್ಕಾಗಿ 75 ಮೀ. ಉದ್ದದವರೆಗೆ ಜಟ್ಟಿ ವಿಸ್ತರಣೆ ಮಾಡುವ ಯೋಜನೆ ಘೋಷಿಸಲಾಗಿದೆ.

"ಮತ್ಸ್ಯ ಕೃಷಿ ಆಶಾ ಕಿರಣ":

"ಮತ್ಸ್ಯ ಕೃಷಿ ಆಶಾ ಕಿರಣ" ಯೋಜನೆಯಡಿ ಪ್ರಮುಖ ಕೆರೆಗಳ 2.500 ಹೆಕ್ಷೇರ್ ಪ್ರದೇಶದಲ್ಲಿ 4,000 ಬಲಿತ ಮೀನುಮರಿ ಹಾಗೂ 2 ಟನ್ ಕೃತಕ ಆಹಾರ ಖರೀದಿಗೆ ಶೇ.50 ರಷ್ಟು ಹಾಗೂ ಗರಿಷ್ಠ 27,000 ರೂ ನೀಡಲು ಕ್ರಮವಹಿಸಲಾಗಿದೆ. ಇದಕ್ಕಾಗಿ 6.75 ಕೋಟಿ ರೂ. ಮೀಸಲಿಡಲಾಗಿದೆ.

ಮೀನುಗಾರರ ಸಹಕಾರ ಸಂಘಗಳಿಗೆ ತಮ್ಮ ಸ್ವಂತ ನಿವೇಶನದಲ್ಲಿ ಕನಿಷ್ಠ 500 ಚದರಡಿಯ ಮೀನು ಸಂಗ್ರಹಣೆ ಹಾಗೂ ಮಾರುಕಟ್ಟೆ ಕಟ್ಟಡ ನಿರ್ಮಿಸಲು ಶೆ.75ರಷ್ಟು ಸಹಾಯಧನ ನೀಡಲಾಗುತ್ತದೆ. ತಲಾ ಘಟಕದ ವೆಚ್ಚ 10 ಲಕ್ಷ ರೂ. ಆಗಿದ್ದು, ಪ್ರಸಕ್ತ ಸಾಲಿನಲ್ಲಿ 20 ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಮತ್ಸ್ಯಾಶ್ರಯ ಯೋಜನೆ: 

ಮತ್ಸ್ಯಾಶ್ರಯ ಯೋಜನೆ ಅಡಿಯಲ್ಲಿ 3,000 ಫಲಾನುಭವಿಗಳ ಆಯ್ಕೆ ಮಾಡಲಾಗುವುದು ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News