ಭೂಕಂಪ ನಿರಾಶ್ರಿತರ ಶಿಬಿರವನ್ನು ಧ್ವಂಸಗೊಳಿಸಿದ ನೇಪಾಳ

Update: 2017-03-15 14:42 GMT

ಕಠ್ಮಂಡು (ನೇಪಾಳ), ಮಾ. 15: 2015ರ ನೇಪಾಳ ಭೂಕಂಪ ಸಂತ್ರಸ್ತರಿಗಾಗಿ ರಾಜಧಾನಿಯಲ್ಲಿ ನಿರ್ಮಿಸಲಾಗಿದ್ದ ಪರಿಹಾರ ಶಿಬಿರವೊಂದನ್ನು ಪೊಲೀಸ್ ಭದ್ರತೆಯೊಂದಿಗೆ ಅಧಿಕಾರಿಗಳು ಮಂಗಳವಾರ ಬುಲ್‌ಡೋಝರ್‌ಗಳನ್ನು ಬಳಸಿ ಕೆಡವಿದರು.

ಜನರು ತಮ್ಮ ಮನೆಗಳಿಗೆ ಹಿಂದಿರುಗುವಂತೆ ಮಾಡುವುದಕ್ಕಾಗಿ ಅಧಿಕಾರಿಗಳು ಈ ಬಲವಂತದ ಕ್ರಮವನ್ನು ತೆಗೆದುಕೊಂಡಿದ್ದಾರೆ. 2015ರ ಎಪ್ರಿಲ್‌ನಲ್ಲಿ ಸಂಭವಿಸಿದ್ದ ಭೀಕರ ಭೂಕಂಪದಲ್ಲಿ ಸುಮಾರು 9,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 10 ಲಕ್ಷಕ್ಕೂ ಅಧಿಕ ಮನೆಗಳು, ಸ್ಮಾರಕಗಳು ಮತ್ತು ಇತರ ಕಟ್ಟಡಗಳು ಧ್ವಂಸಗೊಂಡಿವೆ.

ಆದರೆ, ದೇಶದಲ್ಲಿ ನೆಲೆಸಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪುನರ್ನಿರ್ಮಾಣ ನಿಧಾನಗತಿಯಲ್ಲಿ ನಡೆಯುತ್ತಿದೆ.ಕಠ್ಮಂಡುವಿನ ಹೃದಯ ಭಾಗದಲ್ಲಿರುವ ಮಹತ್ವದ ಜಮೀನಿನಲ್ಲಿ ಸ್ಥಾಪಿಸಲಾಗಿರುವ ಶಿಬಿರದಲ್ಲಿ ಸುಮಾರು 2,000 ಮಂದಿ ವಾಸಿಸುತ್ತಿದ್ದರು. ಅವರು ತಮ್ಮ ಊರುಗಳಿಗೆ ಹಿಂದಿರುಗಿ ತಮ್ಮ ಮನೆಗಳನ್ನು ಪುನರ್ನಿರ್ಮಿಸಲು ನಿರಾಕರಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘‘ಅವರು ಸರಕಾರ ನೀಡಿದ ಹಣವನ್ನು ತೆಗೆದುಕೊಂಡು ತಮ್ಮ ಮನೆಗಳನ್ನು ಪುನರ್ನಿರ್ಮಿಸಬೇಕು’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News