×
Ad

ಕರ್ನಾಟಕ ಬಜೆಟ್-2017: ಎತ್ತಿನಹೊಳೆ, ಪಶ್ಚಿಮ ವಾಹಿನಿ ಯೋಜನೆಗಳಿಗೆ ಬಜೆಟ್ ನಲ್ಲಿ ಏನಿದೆ?

Update: 2017-03-15 20:20 IST

ಮಂಗಳೂರು, ಮಾ.15: 2017-18ನೆ ಸಾಲಿನಲ್ಲಿ 6,000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಜಲಸಂಪನ್ಮೂಲ ಕ್ಷೇತ್ರದ ಅಭಿವೃದ್ಧಿಗೆ ಮೀಸಲಿರಿಸಲಾಗಿದೆ. 

ಕರಾವಳಿ ಭಾಗದಲ್ಲಿ ಎತ್ತಿನ ಹೊಳೆ ಯೋಜನೆಯಡಿ ಈಗಾಗಲೇ ಕಯಗೆತ್ತಿಕೊಂಡಿರುವ lift component ನ್ನು ಪೂರ್ಣಗೊಳಿಸಿ ನೀರನ್ನು ಎತ್ತಲು ಕ್ರಮ ವಹಿಸಲಾಗಿದೆ. ಹಾಗೂ  ಬೈರಗೊಂಡ್ಲು ಜಲಾಶಯ ನಿರ್ಮಾಣ ಪ್ರಾರಂಭಿಸಲಾಗುವುದು, ಕಾಲುವೆ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಲಾಗಿದೆ.

ಸಣ್ಣ ನೀರಾವರಿ ಕ್ಷೇತ್ರದಲ್ಲಿ  ಕರಾವಳಿ ಜಿಲ್ಲೆಗಳಲ್ಲಿ "ಪಶ್ಚಿಮ ವಾಹಿನಿ" ಯೋಜನೆಯಡಿ ಕಿಂಡಿ ಆಣೆಕಟ್ಟುಗಳ ನಿರ್ಮಾಣಕ್ಕೆ ಹೊಸ ಯೋಜನೆ ಘೋಷಿಸಲಾಗಿದ್ದು, ಇದಕ್ಕಾಗಿ 100 ಕೋಟಿ ರೂ. ಮೀಸಲಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News