ಅಮೆರಿಕ: ಆರೋಗ್ಯ ಕಾರ್ಯಕ್ರಮದ ಮುಖ್ಯಸ್ಥೆಯಾಗಿ ಭಾರತೀಯ ಅಮೆರಿಕನ್ ಸೀಮಾ ಪ್ರಮಾಣ
Update: 2017-03-15 20:39 IST
ವಾಶಿಂಗ್ಟನ್, ಮಾ. 15: ಅಮೆರಿಕದ ಮೆಡಿಕೇರ್ ಮತ್ತು ಮೆಡಿಕೇಡ್ ಸೇವಾ ಕೇಂದ್ರಗಳ ಆಡಳಿತಾಧಿಕಾರಿಯಾಗಿ ಭಾರತೀಯ ಅಮೆರಿಕನ್ ಸೀಮಾ ವರ್ಮಾ ಮಂಗಳವಾರ ಅಧಿಕಾರದ ಪ್ರಮಾಣವಚನ ಸ್ವೀಕರಿಸಿದರು.
ಉಪಾಧ್ಯಕ್ಷ ಮೈಕ್ ಪೆನ್ಸ್, ವರ್ಮಾರಿಗೆ ಪ್ರಮಾಣವಚನ ಬೋಧಿಸಿದರು.
ವಾರ್ಷಿಕ ಒಂದು ಲಕ್ಷ ಕೋಟಿ ಡಾಲರ್ ವ್ಯವಹಾರ ನಡೆಸುವ ಸಂಸ್ಥೆಯು ನರ್ಸಿಂಗ್ ಹೋಮ್ ನಿವಾಸಿಗಳಿಂದ ಹಿಡಿದು ನವಜಾತ ಶಿಶುಗಳವರೆಗೆ ಎಲ್ಲರ ಆರೋಗ್ಯ ವಿಮೆ ಕಾರ್ಯಕ್ರಮಗಳ ಉಸ್ತುವಾರಿ ನೋಡಿಕೊಳ್ಳುತ್ತದೆ.
ಅವರ ಆಯ್ಕೆಯನ್ನು ಸೆನೆಟ್ ಸೋಮವಾರ 55-43 ಮತಗಳ ಅಂತರದಿಂದ ಅನುಮೋದಿಸಿತ್ತು.