ಮಂಗಳೂರು: ಪಕ್ಕಲಡ್ಕ ಸ್ನೇಹ ಪಬ್ಲಿಕ್ ಸ್ಕೂಲ್ ನಲ್ಲಿ ಮೌಲ್ಯ ಶಿಕ್ಷಣ ಸಂಘ ಉದ್ಘಾಟನೆ

Update: 2017-03-15 18:00 GMT

ಮಂಗಳೂರು, ಮಾ.15: ಪಕ್ಕಲಡ್ಕ ಸ್ನೇಹ ಪಬ್ಲಿಕ್ ಸ್ಕೂಲ್ ನ ದಶಮಾನೊತ್ಸವದ ಅಂಗವಾಗಿ ಸ್ನೇಹ ಪಬ್ಲಿಕ್ ಸ್ಕೂಲ್ ನಲ್ಲಿ ಮೌಲ್ಯ ಶಿಕ್ಷಣ ಸಂಘವನ್ನು ಉಧ್ಘಾಟಿಸಲಾಯಿತು.

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಅಧ್ಯಕ್ಷರಾದ ಪ್ರೊಫೆಸರ್ ರಫೀಕ್ ಬೀದರ್ ಈ ಸಂಘವನ್ನು ಉಧ್ಘಾಟಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು‌

ವಿದ್ಯಾರ್ಥಿ ಹಸೀಬ್ ಕಿರಾಅತ್ ಪಠಿಸಿದರು. ಅಬ್ದುಲ್ಲಾ ಶಾಹಿಲ್ ಸಂಘದ ಕಾರ್ಯ ಮತ್ತು ಉದ್ದೇಶಗಳ ಬಗ್ಗೆ ತಿಳಿಸಿದರು.

ವಿದ್ಯಾರ್ಥಿನಿ ಹನ ಮತ್ತು ಬಳಗದವರು ಗಾಯನವನ್ನು ನಡೆಸಿಕೊಟ್ಟರು. ವಿದ್ಯಾರ್ಥಿನಿ ಸಲ್ಮಾ ಫಾತಿಮ ಕಾರ್ಯಕ್ರಮ ನಿರೂಪಿಸಿದರು ಶಾಲಾ ಅಧ್ಯಕ್ಷ ಯೂಸುಫ್ ಪಕ್ಕಲಡ್ಕ ನೆನಪಿನ ಕಾಣಿಕೆ ನೀಡಿದರು.

ಬ್ರ. ತಲ್ಹಾ ಇಸ್ಮಾಯಿಲ್, ಮುಖೋಪಾಧ್ಯಾಯಿನಿ ನಾಗರತ್ನ ಮತ್ತು ಸಂಘದ ಸಂಚಾಲಕಿಯರು ಮತ್ತು ಅಧ್ಯಾಪಕಿಯರೂ ಆದ ರೈಹಾನ, ಶಹನಾಝ್ ಅಧ್ಯಾಪಕರಾದರ ಅಶೀರುದ್ದೀನ್, ಫೈರೋಝ್ ಅಬ್ದುಲ್ಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News