ಪಂಜಾಬ್ ಮುಖ್ಯಮಂತ್ರಿಯಾಗಿ ಅಮರೀಂದರ್ ಸಿಂಗ್ ಪ್ರಮಾಣ
Update: 2017-03-16 11:01 IST
ಚಂಡೀಗಢ, ಮಾ. 16: ಪಂಜಾಬ್ ನ 26ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನ ಕ್ಯಾ.ಅಮರೀಂದರ್ ಸಿಂಗ್ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ಪಂಜಾಬ್ ನ ರಾಜಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಿಜಯೇಂದ್ರ ಪಾಲ್ ಸಿಂಗ್ ಅವರು ಕ್ಯಾ. ಅಮರೀಂದರ್ ಸಿಂಗ್ ಮತ್ತು ಅವರ ಸಚಿವ ಸಂಪುಟದ ನೂತನ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಮತ್ತಿತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.