ರಾಜ್ ನಾಥ್ ಸಿಂಗ್ ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ

Update: 2017-03-16 06:30 GMT

ಲಕ್ನೋ, ಮಾ.16: ಉತ್ತರ ಪ್ರದೇಶದ ನೂತನ ಮುಖ್ಯ ಮಂತ್ರಿಯನ್ನಾಗಿ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಬಿಜೆಪಿ ಆಯ್ಕೆ ಮಾಡಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಚಿವ ಪಿಯೂಶ್‌ ಗೋಯಲ್‌ ಅವರನ್ನು ಇದೇ ಸಂದರ್ಭದಲ್ಲಿ ಹಣಕಾಸು ಸಚಿವರಾಗಿ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. 
ದೀಪಕ್‌ ಶರ್ಮ ಮತ್ತು ಸಿದ್ದಾರ್ಥ ನಾಥ್‌ ಸಿಂಗ್‌  ಉತ್ತರ ಪ್ರದೇಶದ ಮುಖ್ಯ ಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ ಬಿಜೆಪಿಯ ವರಿಷ್ಠ ನಾಯಕರು ರಾಜನಾಥ್‌ ಸಿಂಗ್‌ ಅವರಿಗೆ  ಮುಖ್ಯ ಮಂತ್ರಿ ಪಟ್ಟಕಟ್ಟಲು ನಿರ್ಧರಿಸಿದ್ದಾರೆ ಎನ್ನಲಾಗಿದೆ

ಇದೇ ಸಂದರ್ಭದಲ್ಲಿ ಅರುಣ್‌ ಜೆಟ್ಲಿ ಗೃಹ ಮತ್ತು ರಕ್ಷಣಾ ಸಚಿವರಾಗಲಿದ್ದಾರೆ. ಹಣಕಾಸು ಸಚಿವರಾಗಿರುವ ಜೆಟ್ಲಿ ಅವರಿಗೆ ಈಗಾಗಲೇ ಮನೋಹರ್ ಪಾರಿಕ್ಕ ರ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ರಕ್ಷಣಾ ಖಾತೆಯ ಹೆಚ್ಚುವರಿ ಹೊಣೆ ನೀಡಲಾಗಿದೆ. ರಕ್ಷಣಾ ಸಚಿವರಾಗಿದ್ದ ಪಾರಿಕ್ಕರ್ ಗೋವಾ ಮುಖ್ಯ ಮಂತ್ರಿಯಾಗುವ ಉದ್ದೇಶಕ್ಕಾಗಿ ರಕ್ಷಣಾ ಸಚಿವ ಹುದ್ದೆಯನ್ನು  ತ್ಯಜಿಸಿದ್ದರು

ಒಂದು ವೇಳೆ ರಾಜನಾಥ್ ಸಿಂಗ್ ಉತ್ತರ ಪ್ರದೇಶಕ್ಕೆ ಮುಖ್ಯ ಮಂತ್ರಿಯಾಗಿ ತೆರಳಿದರೆ ಗೃಹ ಖಾತೆ ಜೆಟ್ಲಿಗೆ ಸಿಗಲಿದೆ.  ಅವರ ಕೈಯಲ್ಲಿರುವ ಹಣಕಾಸು ಖಾತೆ ಇಂಧನ ಸಚಿವ ಪಿಯೂಷ್‌ ಗೋಯಲ್‌  ಹೆಗಲಿಗೆ ರವಾನೆಯಾಗಲಿದೆ ಎಂದು ಗೊತ್ತಾಗಿದೆ.

ಬುಧವಾರ ನಡೆದ ಬಿಜೆಪಿಯ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ  ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News