ಅಗರಿ ಎಂಟರ್‌ಪ್ರೈಸ್‌ನಲ್ಲಿ ಲಕ್ಕಿ ಡ್ರಾ ಕಾರ್ಯಕ್ರಮ
Update: 2017-03-16 12:54 IST
ಮಂಗಳೂರು, ಮಾ.16: ಅಗರಿ ಎಂಟರ್‌ಪ್ರೈಸ್ ವತಿಯಿಂದ ಸುರತ್ಕಲ್ ಶಾಖೆಯಲ್ಲಿ ಡ್ರಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಆಯ್ಕೆಯಾದ 10 ಅದೃಷ್ಟಶಾಲಿಗಳಿಗೆ ಬಹುಮಾನ ನೀಡಲಾಯಿತು.
ಜೈನಾಬ್, ದಿನೇಶ್ ರಾಯ್, ಸರಿತಾ, ಪ್ರೇಮಾ, ಶಿವಾಜಿ ದೇವಾಡಿಗ್ ಇವರಿಗೆ ಡ್ರಾ ಬಹುಮಾನವನ್ನು ವಿತರಿಸಲಾಯಿತು.
ಪ್ರಶಾಂತ, ನಿಸ್ಸಾರ್, ಮಜೀಬ್ ರೆಹೆಮಾನ್, ರಾಧಾಕೃಷ್ಣ ಭಟ್, ಅಗರಿ ಎಂಟರ್‌ಪ್ರೈಸಸ್ ಸುರತ್ಕಲ್ ಶಾಖೆಯ ಮ್ಯಾನೇಜರ್ ಮಹೇಶ್ ದೇವಾಡಿಗ ಹಾಗೂ ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.
ಅಗರಿ ಎಂಟರ್‌ಪ್ರೈಸ್‌ಸ್ ಗ್ರಾಹಕರಿಗೆ ಪ್ರತಿ ತಿಂಗಳು ಡ್ರಾ ಮೂಲಕ ಹಲವಾರು ಬಹುಮಾನಗಳನ್ನು ನೀಡುತ್ತಾ ಗೌರವಿಸುತ್ತಾ ಬಂದಿದೆ. ಮೂಡಬಿದ್ರೆ, ಮಂಗಳೂರು, ಪಡುಬಿದ್ರಿ, ಶುಭಗಿರಿ, ಸುರತ್ಕಲ್ ಹಾಗೂ ಉಡಪದವಿನಲ್ಲಿ ತನ್ನ ಸಂಸ್ಥೆಯನ್ನು ಸ್ಥಾಪಿಸಿ ಗ್ರಾಹಕರಿಗೆ ಬಹುಮಾನಗಳನ್ನು ನೀಡಿ ಗೌರವಿಸುತ್ತಾ ಬಂದಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.