ಬಹುಮತ ಸಾಬೀತುಪಡಿಸಿದ ಗೋವಾ ಮುಖ್ಯ ಮಂತ್ರಿ ಮನೋಹರ್ ಪಾರಿಕ್ಕರ್
Update: 2017-03-16 12:58 IST
ಪಣಜಿ,ಮಾ .16: ಗೋವಾ ವಿಧಾನಸಭೆಯಲ್ಲಿ ಇಂದು ಮುಖ್ಯ ಮಂತ್ರಿ ಮನೋಹರ್ ಪಾರಿಕ್ಕರ್ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೋವಾ ವಿಧಾನಸಭೆಯಲ್ಲಿ ಮುಖ್ಯ ಮಂತ್ರಿ ಪಾರಿಕ್ಕರ್ ನೇತೃತ್ವದ ಸರಕಾರ ವಿಶ್ವಾಸ ಮತದಲ್ಲಿ ವಿಜಯಿಯಾಗಿದೆ. 22ಶಾಸಕರು ಪಾರಿಕ್ಕರ್ ಸರಕಾರವನ್ನು ಬೆಂಬಲಿಸಿ ಮತ ಚಲಾಯಿಸಿದ್ದಾರೆ. ಸುಪ್ರೀಂ ಕೋರ್ಟ್ ಪಾರಿಕ್ಕರ್‌ಗೆ ಬಹುಮತ ಸಾಬೀತುಪಡಿಲು ೪೮ ಗಂಟೆಗಳ ಗಡುವು ವಿಧಿಸಿತ್ತು.
ಬಿಜೆಪಿಯ 13, ಎಂಜಿಪಿ 3, ಗೋವಾ ಫಾರ್ವರ್ಡ್ 3 , ಎನ್‌ಸಿಪಿ 1, ಮತ್ತು 2 ಪಕ್ಷೇತರ ಶಾಸಕರು ಪಾರಿಕ್ಕರ್ ಸರಕಾರಕ್ಕೆ ಬೆಂಬಲ ನೀಡಿದ್ದಾರೆ.
ಇದರೊಂದಿಗೆ ಮನೋಹರ್ ಪಾರಿಕ್ಕರ್ ಆಯ್ಕೆ ಬಗ್ಗೆ ತಕರಾರು ಮಾಡಿದ್ದ ಕಾಂಗ್ರೆಸ್ ಗೆ ಮುಖಭಂಗವಾಗಿದೆ .