×
Ad

ಎಸ್‌ಕೆಎಸ್ಸೆಸ್ಸೆಫ್‌ ಬೊಳ್ಳೂರು: ಇಂದು ಸಮಸ್ತದ ಅಗಲಿದ ನೇತಾರರ ಅನುಸ್ಮರಣೆ ಹಾಗೂ ಮಜ್ಲಿಸುನ್ನೂರ್

Update: 2017-03-16 15:50 IST

ಮಂಗಳೂರು, ಮಾ.16: ಎಸ್‌ಕೆಎಸ್ಸೆಸ್ಸೆಫ್‌ ಬೊಳ್ಳೂರು ಘಟಕ ಇದರ ಆಶ್ರಯದಲ್ಲಿ ಸಮಸ್ತದ ಅಗಲಿದ ನೇತಾರರ ಅನುಸ್ಮರಣೆ ಹಾಗೂ ಆಧ್ಯಾತ್ಮಿಕ ಮಜ್ಲಿಸುನ್ನೂರ್ ಸಂಗಮ ಕಾರ್ಯಕ್ರಮ ಇಂದು ರಾತ್ರಿ 7:00 ಗಂಟೆಗೆ ಸರಿಯಾಗಿ ಹಳೆಯಂಗಡಿಯ ಬೊಳ್ಳೂರಿನ ಮರ್ಹೂಂ ಕೂಟುಮಲ ಭಾಪು ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಹನೀಫ್ ಐ.ಎ.ಕೆ ಇವರು ವಹಿಸಲಿದ್ದು, ಸಮಸ್ತ ದಕ್ಷಿಣ ಕರ್ನಾಟಕ ಮುಶಾವರ ಸದಸ್ಯರಾದ ಬಹುl ಶೈಖುನಾ ಬೊಳ್ಳೂರು ಉಸ್ತಾದ್ ಕಾರ್ಯಕ್ರಮ ಉದ್ಘಾಟನೆ ಮಾಡುವರು. ಬಹುl ಜಿ.ಎಂ ದಾರಿಮಿ ಅತಿಥಿಗಳನ್ನು ಸ್ವಾಗತಿಸಲಿದ್ದು,  ಬಹುl ಯು.ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಪ್ರಾಸ್ತಾವಿಕ ಭಾಷಣ ಮಾಡಲಿರುವರು.

ಬಹುl ಯು.ಕೆ ಮುಹಮ್ಮದ್ ಹನೀಫ್ ನಿಝಾಮಿ ಕಾಸರಗೋಡು ಮುಖ್ಯ ಪ್ರಭಾಷಣ ನಡೆಸಲಿರುವರು.

ಮಜ್ಲಿಸುನ್ನೂರ್ ಸಂಗಮದ ನೇತೃತ್ವವನ್ನು ಬಹುl ಅಸೆಯ್ಯದ್ ಜುನೈದ್ ಜಿಪ್ರೀ ತಂಙಳ್ ಆತೂರು ಇವರು ವಹಿಸಲಿರುವ ಈ ಕಾರ್ಯಕ್ರಮದಲ್ಲಿ 
ಮುಖ್ಯ ಅತಿಥಿಗಳಾಗಿ ಎಸ್‌ಕೆಎಸ್ಸೆಸ್ಸೆಫ್‌  ದ.ಕ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಹುl ಇಸ್ಮಾಯಿಲ್ ಯಮಾನಿ, ಕೋಶಾಧಿಕಾರಿ 
ಹಾಜಿ ಜಲೀಲ್ ಬದ್ರಿಯ, ಬೊಳ್ಳೂರು ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಫೈಝಿ ಕಡಬ, ಬಹುlಇಸ್ಮಾಯಿಲ್ ದಾರಿಮಿ ಸಂತೆಕಟ್ಟೆ, ಬೊಳ್ಳೂರು ಜುಮಾ ಮಸೀದಿಯ ಅಧ್ಯಕ್ಷ  ಹಾಜಿ ಎ.ಕೆ ಝೀಲಾನಿ, ಬೊಳ್ಳೂರು ಜುಮಾ ಮಸೀದಿಯ ಕಾರ್ಯದರ್ಶಿ,  ಬಿ.ಎಂ. ಸುಲೈಮಾನ್, ಬೊಳ್ಳೂರು ಜುಮಾ ಮಸೀದಿಯ ಮಾಜಿ ಕಾರ್ಯದರ್ಶಿ ಹಾಜಿ ಅಬ್ದುಲ್ ಕಾದರ್ ಐ.ಎ.ಕೆ, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯ ಎಂ.ಅಬ್ದುಲ್ ಖಾದರ್ ಹಾಗೂ  ಅಝೀಝ್ ಐ.ಎ.ಕೆ ಬೊಳ್ಳೂರು, ಎಸ್‌ಕೆಎಸ್ಸೆಸ್ಸೆಫ್‌ ಸುರತ್ಕಲ್ ವಲಯ ಪ್ರಧಾನ ಕಾರ್ಯದರ್ಶಿ ಬಹುl ಎಂ.ಎಸ್ ಹೈದರ್ ಮುಸ್ಲಿಯಾರ್, ಹಾಜಿ ಪಂಡಿತ್ ಬಿ.ಎ ಇದ್ದಿನಬ್ಬ ತೋಡಾರ್, ಬಶೀರ್ ಐ.ಎ.ಕೆ, ಯೂಸುಫ್ ಇಂದಿರಾನಗರ,  ಇಸ್ಮಾಯಿಲ್ ಕೊಲ್ನಾಡ್, ಅಬ್ದುಲ್ ಖಾದರ್ ಮಿಲನ್,  ಹನೀಫ್ ಇಡ್ಯಾ ಸೇರಿ
ಇನ್ನಿತರ ಉಲಮಾ ಉಮರಾ ಹಾಗೂ ರಾಜಕೀಯ ನಾಯಕರು  ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News