×
Ad

ಸುಳ್ಯ ದೇವಸ್ಥಾನದಲ್ಲಿ ಅಚ್ಚರಿಯ ಶಬ್ಧ, ಭಸ್ಮ !

Update: 2017-03-16 16:15 IST

ಮಂಗಳೂರು, ಮಾ.16: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಲ್ಕುಂದದ ಬಸವನಮೂಲೆಯ ಬಸವೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಅಚ್ಚರಿಯೊಂದು ನಡೆದಿದೆ.

ಮಾ. 11ರಂದು ಬೆಳಗ್ಗೆ 5 ಗಂಟೆಯಿಂದ 5 ಗಂಟೆಯ ಸುಮಾರಿಗೆ ದೇವಸ್ಥಾನದಲ್ಲಿ  ಜಾಗಟೆ , ಕೊಂಬು ಕಹಳೆಯ ಶಬ್ದ ಕೇಳಿಸಿದೆ ಎಂದು ಹೇಳಲಾಗಿದೆ.

ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಇದೇ ಸಂದರ್ಭದಲ್ಲಿ ಯಾರು ಇಲ್ಲದ ವೇಳೆ ಈ ರೀತಿಯ ಜಾಗಟೆ, ಕೊಂಬು ಕಹಳೆಯ ಶಬ್ದ ಊರಿನವರಿಗೆ ಕೇಳಿಸಿದೆ.

ನಂತರ ಊರಿನವರು ದೇವಸ್ಥಾನ ಕ್ಕೆ ಬಂದು ನೋಡಿದಾಗ ದೇವಸ್ಥಾನದ  ಸುತ್ತಲೂ ಭಸ್ಮ ಇರುವುದು ಗಮನಕ್ಕೆ ಬಂದಿದೆ. ದೇವಸ್ಥಾನದ ಬಾಲವನದಿಂದ ನಾಗನಕಟ್ಟೆಯವರೆಗೆ ಈ ಭಸ್ಮ ದ ಸಾಲು ಹೋಗಿ ಅಲ್ಲಿದ ಗರ್ಭಗುಡಿಯವರೆಗೆ ಬಂದಿದೆ. ಇದು ಅಚ್ಚರಿಗೆ ಕಾರಣವಾಗಿದೆ.

ಒಂದೆಡೆ ಇದು ಅಚ್ಚರಿಗೆ ಕಾರಣವಾಗಿದ್ದರೆ ಮತ್ತೊಂದೆಡೆ ಯಾರಾದರೂ ಈ ರೀತಿ ಮಾಡಿರಬಹುದೆ ಎಂಬ ಸಂಶಯವನ್ನು ಸೃಷ್ಟಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News