ಉ.ಪ್ರ.ಬಿಜೆಪಿ ಅಧ್ಯಕ್ಷ ಮೌರ್ಯ ಅಸ್ವಸ್ಥ, ಐಸಿಯುಗೆ ದಾಖಲು
Update: 2017-03-16 18:05 IST
ಲಕ್ನೋ,ಮಾ.16: ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಹುದ್ದೆಗೆ ಪ್ರಮುಖ ಸ್ಪರ್ಧಿಯಾಗಿರುವ ಕೇಶವ ಪ್ರಸಾದ ಮೌರ್ಯ ಅವರು ತೀವ್ರ ಅಸ್ವಸ್ಥಗೊಂ ಡಿದ್ದು, ಅವರನ್ನು ಇಲ್ಲಿಯ ಆರ್‌ಎಂಎಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖ ಲಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ಬಳಿಕ ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಗಳ ಪೈಕಿ ಮೌರ್ಯ ಮುಂಚೂಣಿಯಲ್ಲಿದ್ದಾರೆ.