×
Ad

ಕಣ್ಣೀರೊರಸುವ ಅವಕಾಶ ಕಳೆದುಕೊಳ್ಳದಿರಿ: ಪದ್ಮಶ್ರೀ ಗಿರೀಶ್ ಭಾರದ್ವಾಜ್

Update: 2017-03-16 18:07 IST

ಮಂಗಳೂರು, ಮಾ.16: ಯಾರಾದರೂ ಕಷ್ಟದಲ್ಲಿರುವಾಗ ಅವರ ಕಣ್ಣೀರೊರಸುವ ಅವಕಾಶ ದೊರೆತರೆ ಅದರಿಂದ ಆತ್ಮತೃಪ್ತಿಯಾಗುತ್ತದೆ. ಅಂತಹ ಅವಕಾಶವನ್ನು ಯಾವತ್ತೂ ಕಳೆದುಕೊಳ್ಳಬಾರದು ಎಂದು ಪದ್ಮಶ್ರೀ ಗಿರೀಶ್ ಭಾರದ್ವಾಜ್ ಗೃಹ ರಕ್ಷದ ದಳದ ಸಿಬ್ಬಂದಿಗಳಿಗೆ ಕರೆ ನೀಡಿದ್ದಾರೆ.

ಪದ್ಮಶ್ರೀ ಪುರಸ್ಕೃತ, ತೂಗು ಸೇತುವೆಗಳ ಸರದಾರ ಎಂದೇ ಕರೆಸಿಕೊಳ್ಳುವ ಗಿರೀಶ್ ಭಾರದ್ವಜ್‌ರಿಗೆ ನಗರದ ಮೇರಿಹಿಲ್‌ನಲ್ಲಿರುವ ದ.ಕ. ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಿಕ್ಕ ಅವಕಾಶಗಳನ್ನು ಉದಾಸೀನ ತೋರದೆ ಸದ್ಬಳಕೆ ಮಾಡಿಕೊಂಡಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದವರು ಹೇಳಿದರು.
ಸನ್ಮಾನ ಮಾಡಿದ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಲಾಬ್ ರಾವ್ ಬೊರಸೆ ಮಾತನಾಡಿ, ಯುಪಿಎಸ್‌ಇ ಪರೀಕ್ಷೆ ತಯಾರಿಗಾಗಿ ಓದುವ ಹಂತದಲ್ಲಿ ನಾಗರಿಕ ಸೇವೆ ಮಾಡುವ ವ್ಯಕ್ತಿಗಳ ಪರಿಚಯದಲ್ಲಿ ಮೊದಲು ಸಿಗುವುದೇ ಸಿಗುವುದೇ ಗಿರೀಶ್ ಭಾರದ್ವಾಜ್ ಅವರ ಹೆಸರು ಎಂದರು.

ಗೃಹರಕ್ಷಕ ದಳದ ದ.ಕ. ಜಿಲ್ಲಾ ಸಮಾದೇಷ್ಟ ಡಾ. ಮುರಲೀ ಮೋಹನ್ ಚೂಂತಾರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಮಾದೇಷ್ಟ ಡಾ. ಶಿವಪ್ರಸಾದ್ ರೈ ಮುಖ್ಯ ಅತಿಥಿಯಾಗಿದ್ದರು.

ಉಪ ಸಮಾದೇಷ್ಟ ರಮೇಶ್ ಸ್ವಾಗತಿಸಿದರು. ಸುಳ್ಯ ಘಟಕಾಧಿಕಾರಿ ಜಯಂತ್ ಶೆಟ್ಟಿ ವಂದಿಸಿದರು. ಸಮಿತಾ ನಿರೂಪಿಸಿದರು. ಗಿರೀಶ್ ಭಾರದ್ವಾಜ್ ಅವರು ಗೃಹರಕ್ಷಕ ದಳದ ಸುಳ್ಯ ಘಟಕದ ಮಾಜಿ ಘಟಕಾಧಿಕಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News