ಮಂಗಳೂರು: ಮಾ. 18ರಂದು ಬಿ.ಸಿ. ರೋಡ್ - ಮದ್ದದಲ್ಲಿ ಸಲಫಿ ಸಮಾವೇಶ
Update: 2017-03-16 18:46 IST
ಮಂಗಳೂರು, ಮಾ,16: ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್ ಹಮ್ಮಿಕೊಂಡಿರುವ ಕುರ್‍ಆನ್ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಮಾ. 18 ರಂದು ಶನಿವಾರ ಮಗ್ರಿಬ್ ನಮಾಝ್‍ನ ಬಳಿಕ ಬಿ.ಸಿ. ರೋಡ್ ಸಮೀಪದ ಮದ್ದ ಎಂಬಲ್ಲಿ ಸಲಫಿ ಸಮಾವೇಶವು ಜರಗಲಿದೆ.
ಈ ಸಮಾವೇಶದಲ್ಲಿ ಹಿರಿಯ ವಿದ್ವಾಂಸ ಚುಯೈಲಿ ಅಬ್ದುಲ್ಲ ಮುಸ್ಲಿಯಾರ್ ಉಪನ್ಯಾಸ ನೀಡಲಿದ್ದಾರೆ.
ಸಲಫಿ ಮೂವ್‍ಮೆಂಟ್‍ನ ಕೇಂದ್ರ ಸಮಿತಿ ಅಧ್ಯಕ್ಷ ಯು.ಎನ್. ಅಬ್ದುಲ್ ರಝಾಕ್ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದು, ಸೈಯ್ಯದ್ ಇಬ್ರಾಹೀಂ ಹಾದಿ ತಂಗಳ್ ಆತೂರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಎಸ್.ಕೆ.ಎಸ್.ಎಂ. ಫರಂಗಿಪೇಟೆ ಘಟಕದ ದಾವಾ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಮಾರಿಪಳ್ಳ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ.