ಮಾ.19ರಂದು ಉಳ್ಳಾಲದಲ್ಲಿ ಕುರ್‍ಆನ್ ಪಬ್ಲಿಕ್ ಪರೀಕ್ಷೆ
Update: 2017-03-16 18:48 IST
ಮಂಗಳೂರು, ಮಾ.16: ಸೌತ್ ಕರ್ನಾಟಕ ಸಲಫಿ ಮೂವ್‍ಮೆಂಟ್‍ನ ಅಧೀನ ಸಂಸ್ಥೆಯಾದ ಸಲಫಿ ಎಜುಕೇಶನ್ ಬೋರ್ಡ್, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್ ಮತ್ತು ಸಲಫಿ ಗರ್ಲ್ಸ್ ಮೂವ್‍ಮೆಂಟ್ ರಿಯಾದ್ ಇವುಗಳ ವತಿಯಿಂದ ಆಯೋಜಿಸಲಾದ ಕುರ್‍ಆನ್ ಅಧ್ಯಯನ ಮತ್ತು ಪರೀಕ್ಷಾ ಯೋಜನೆಯ ಅಂಗವಾಗಿ ಮಾರ್ಚ್ 19 ರಂದು ಬೆಳಗ್ಗೆ ಗಂಟೆ 10 ಕ್ಕೆ ಉಳ್ಳಾಲದ ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪವಿತ್ರ ಕುರ್‍ಆನಿನ ಅಲ್ ಹಾಖ್ಖ ಮತ್ತು ಅಲ್ ಮಆರಿಜ್ ಎಂಬೀ ಎರಡು ಅಧ್ಯಾಯಗಳಲ್ಲಿ ಪಬ್ಲಿಕ್ ಪರೀಕ್ಷೆ ನಡೆಯಲಿದೆ.
ಪರೀಕ್ಷೆಯಲ್ಲಿ ಪಾಲ್ಗೊಳ್ಳುವವರು ಮಸ್ಜಿದ್ ಇಬ್ರಾಹೀಂ ಖಲೀಲ್‍ನ ಬಳಿಯ ದಾರುಲ್ ಖೈರ್‌ನಲ್ಲಿ ಹೆಸರು ನೋಂದಾಯಿಸಿ ಹಾಲ್ ಟಿಕೇಟ್ ಪಡೆಯಬೇಕೆಂದು ಸಲಫಿ ವಿದ್ಯಾಭ್ಯಾಸ ಬೋರ್ಡ್‍ನ ಅಧ್ಯಕ್ಷ ಮೌಲವಿ ಮುಸ್ತಫಾ ದಾರಿಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.