ಮರ್ಕಝುಲ್ ಹುದಾ ಮದೀನಾ ಸಮಿತಿ ರಚನೆ
ಪುತ್ತೂರು, ಮಾ.16: ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಮದೀನಾ ಸಮಿತಿಯ ಮಹಾ ಸಭೆಯು ಮದೀನಾ ಮುನವ್ವರದ ಕೆಸಿಎಫ್ ಭವನದಲ್ಲಿ ಮಂಗಳವಾರ ನಡೆಯಿತು.
ಸಭೆಯನ್ನು ಫಾರೂಕ್ ಸಅದಿ ಜಿದ್ದಾ ಉದ್ಘಾಟಿಸಿದರು. ಮದೀನಾ ಕೆ.ಸಿ.ಎಫ್ ಝೋನಲ್ ಅಧ್ಯಕ್ಷ ಫಾರೂಕ್ ನಈಮಿ ಮಾತನಾಡಿ, 2001ರಲ್ಲಿ ನಿರ್ಮಾಣಗೊಂಡ ಕುಂಬ್ರ ಮರ್ಕಝುಲ್ ಹುದಾ ಕಾಲೇಜ್ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಧಾರ್ಮಿಕ, ಲೌಕಿಕವಾಗಿ ಅತ್ಯುತ್ತಮ ಶಿಕ್ಷಣ ನೀಡುತ್ತಿದ್ದು ಕರ್ನಾಟಕದಲ್ಲಿಯೇ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದ ಅವರು,ಕೇರಳದ ಚೆರವಾಡಿ ಮಹಿಳಾ ಕಾಲೇಜ್ ನಂತೆ ಕರ್ನಾಟಕದಲ್ಲಿ
ಕುಂಬ್ರ ಮರ್ಕಝುಲ್ ಹುದಾ ಕಾಲೇಜ್ ಹೆಸರುವಾಸಿಯಾಗಿದೆ ಎಂದರು.
ಇದೇ ವೇಳೆ ಮರ್ಕಝುಲ್ ಹುದಾ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್, ದಾರುಲ್ ಇರ್ಶಾದ್ ಇದರ ಉಮ್ಮರ್ ಸಖಾಫಿ ಪರಪ್ಪು, ಇಬ್ರಾಹಿಂ ಮದನಿಯವರು ಮಾತನಾಡಿದರು ಮಾತನಾಡಿದರು.
ಇದೇ ವೆಳೆ ಕೆಸಿಎಫ್ ಮದೀನಾ ಝೋನಲ್, ಸೆಕ್ಟರ್ ಹಾಗೂ ಅಲ್ ಇಹ್ಸಾನ್ ಮದೀನಾ ಘಟಕದ ವತಿಯಿಂದ ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್ ಅವರನ್ನು ಸನ್ಮಾನಿಸಲಾಯಿತು.
ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಮದೀನಾ ಸಮಿತಿಯ ನೂತನ ಪದಾಧಿಕಾರಿಗಳು: ಅಧ್ಯಕ್ಷರಾಗಿ ಇಬ್ರಾಹಿಂ ಮದನಿ ಮರ್ದಾಳ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಸಂಗಮ್ ಸುಳ್ಯ ಅವರನ್ನು ಆಯ್ಕೆ ಗೊಳಿಸಲಾಯಿತು.
ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಕಿನ್ಯಾ , ಹಾಗೂ ಉಪಾಧ್ಯಕ್ಷರುಗಳಾಗಿ ರಝಾಕ್ ಅಳಕೆಮಜಲ್, ತಾಜುದ್ದೀನ್ ಸುಳ್ಯ , ಹಮೀದ್ ಪೊರಂಕಾಜೆ ಅವರನ್ನು ಆಯ್ಕೆ ಮಾಡಲಾಯಿತು. ಸಹಕಾರ್ಯದರ್ಶಿಯಾಗಿ ಇಕ್ಬಾಲ್ ಎಲ್. ಕುಪ್ಪೆಪದವು, ಉಮ್ಮರ್ ಗೇರುಕಟ್ಟೆ ಅವರನ್ನು ಆಯ್ಕೆಗೊಳಿಸಲಾಯಿತು.
ಸಮಿತಿಯ ಸಲಹೆಗಾರರಾಗಿ ಫಾರೂಕ್ ನಈಮಿ, ಅಶ್ರಫ್ ಸಖಾಫಿ ನೂಜಿ, ಇಸ್ಮಾಯಿಲ್ ಉಳ್ಳಾಲ್, ಹಾಗೂ ಸಮದ್ ಕೊಡಗು ಅವರನ್ನು ನೇಮಿಸಲಾಯಿತು.
ಕಾರ್ಯಕ್ರಮವನ್ನು ಉಮ್ಮರ್ ಗೇರುಕಟ್ಟೆ ನಿರೂಪಿಸಿದರು.