ಕೊಂಕಣ ರೈಲಿನಲ್ಲಿ ಅಕ್ರಮ ಮದ್ಯ ಪತ್ತೆ
Update: 2017-03-16 20:40 IST
ಉಡುಪಿ, ಮಾ.16: ರೈಲ್ವೆ ಪೊಲೀಸರು ಇಂದು ಕಾರವಾರದಲ್ಲಿ ಕೊಂಕಣ ರೈಲ್ವೆಯಲ್ಲಿ ನಡೆಸಿದ ವಿಶೇಷ ತಪಾಸಣೆಯ ವೇಳೆ ಮಡಂಗಾವ್ ಹಾಗೂ ಮಂಗಳೂರು ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲಿನಲ್ಲಿ ವಾರಸುದಾರರಿಲ್ಲದ ಅಕ್ರಮ ಮದ್ಯ ಪತ್ತೆಯಾಗಿದೆ.
ರೈಲು ನಂ.56641ರ ಜನರಲ್ ಡಬ್ಬಿಯಲ್ಲಿ ಯಾರೂ ವಾರಸುದಾರರಿಲ್ಲದ ಒಟ್ಟು 54ಲೀ. ಮದ್ಯವಿರುವ ವಿವಿಧ ಗಾತ್ರದ 72 ಬಾಟಲುಗಳು ಪತ್ತೆಯಾಗಿವೆ.
ಇವುಗಳನ್ನು ವಶಪಡಿಸಿಕೊಂಡಿರುವ ರೈಲ್ವೆ ಪೊಲೀಸರು ಬಳಿಕ ಇದನ್ನು ಕಾರವಾರದ ಅಬಕಾರಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ವಶ ಪಡಿಸಿಕೊಂಡ ಮದ್ಯದ ಒಟ್ಟು ಮೌಲ್ಯ ಹತ್ತು ಸಾವಿರ ರೂ.ಗಳೆಂದು ಅಂದಾಜಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.