×
Ad

ಪ್ಯಾರಿಸ್: ಐಎಂಎಫ್ ಕಚೇರಿಯಲ್ಲಿ ಪತ್ರ ಬಾಂಬ್ ಸ್ಫೋಟ

Update: 2017-03-16 20:48 IST

ಪ್ಯಾರಿಸ್, ಮಾ. 16: ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಪ್ಯಾರಿಸ್ ಕಚೇರಿಯಲ್ಲಿ ಗುರುವಾರ ಪತ್ರ ಬಾಂಬೊಂದು ಸ್ಫೋಟಗೊಂಡಿದ್ದು, ಓರ್ವ ಕಾರ್ಯದರ್ಶಿಯ ಕೈಗಳು ಮತ್ತು ಮುಖದಲ್ಲಿ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದರು.

ಸ್ಫೋಟದ ಬಳಿಕ, ಮುನ್ನೆಚ್ಚರಿಕೆಯ ಕ್ರಮವಾಗಿ ಫ್ರಾನ್ಸ್ ರಾಜಧಾನಿಯ ಹೃದಯ ಭಾಗದಲ್ಲಿರುವ ಐಎಂಎಫ್ ಕಟ್ಟಡದಿಂದ ಉದ್ಯೋಗಿಗಳನ್ನು ತೆರವುಗೊಳಿಸಲಾಯಿತು ಎಂದು ಎಂದು ಪೊಲೀಸ್ ಮೂಲವೊಂದು ತಿಳಿಸಿದೆ.

ಸ್ಫೋಟವನ್ನು ಖಂಡಿಸಿರುವ ಐಎಂಎಫ್ ಮುಖ್ಯಸ್ಥೆ ಕ್ರಿಸ್ಟೀನ್ ಲ್ಯಾಗರ್ಡ್, ಅದು ‘ಹೇಡಿಗಳ ಕೃತ್ಯ’ವಾಗಿದೆ ಎಂಬುದಾಗಿ ಬಣ್ಣಿಸಿದ್ದಾರೆ.

ಸ್ಫೋಟದ ಹೊಣೆಯನ್ನು ಯಾರೂ ವಹಿಸಿಕೊಂಡಿಲ್ಲ.


ಫ್ರಾನ್ಸ್: ಹೈಸ್ಕೂಲ್‌ನಲ್ಲಿ ಗುಂಡು ಹಾರಾಟ

ದಕ್ಷಿಣ ಫ್ರಾನ್ಸ್‌ನ ಸಣ್ಣ ಪಟ್ಟಣ ಗ್ರಾಸ್‌ನ ಹೈಸ್ಕೂಲೊಂದರಲ್ಲಿ ನಡೆದ ಗುಂಡು ಹಾರಾಟದಲ್ಲಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ.

ರೈಫಲ್, ಹ್ಯಾಂಡ್‌ಗನ್‌ಗಳು ಮತ್ತು ಗ್ರೆನೇಡ್‌ಗಳನ್ನು ಹೊಂದಿದ್ದ 17 ವರ್ಷದ ವಿದ್ಯಾರ್ಥಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

ಇಬ್ಬರು ವಿದ್ಯಾರ್ಥಿಗಳು ಹೆಡ್‌ಮಾಸ್ಟರ್ ಮೇಲೆ ಗುಂಡು ಹಾರಿಸಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲವೊಂದು ತಿಳಿಸಿದೆ. ಘಟನೆಯಲ್ಲಿ ಹೆಡ್‌ಮಾಸ್ಟರ್ ಗಾಯಗೊಂಡಿದ್ದಾರೆ.

‘‘ಇಬ್ಬರು ಶಂಕಿತರ ಪೈಕಿ ಓರ್ವನನ್ನು ಬಂಧಿಸಲಾಗಿದೆ ಹಾಗೂ ಇನ್ನೋರ್ವ ಪರಾರಿಯಾಗಿದ್ದಾನೆ. ದಾಳಿ ಸಂದರ್ಭದಲ್ಲಿ ಹೆದರಿದ ವಿದ್ಯಾರ್ಥಿಗಳು ಸಮೀಪದ ಸೂಪರ್ ಮಾರುಕಟ್ಟೆಯೊಂದರಲ್ಲಿ ಅಡಗಿಕೊಂಡಿದ್ದರು’’ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News