ಯುವ ಸಮುದಾಯಕ್ಕೆ ಉಲೇಮಾಗಳ ಉಪದೇಶ ಅಗತ್ಯ: ಸಚಿವ ಯು.ಟಿ. ಖಾದರ್
ಪುತ್ತೂರು, ಮಾ.15: ಸಮುದಾಯದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮಹತ್ತರವಾಗಿದ್ದು, ಯುವ ಸಮುದಾಯದಲ್ಲಿ ಸನ್ನಡತೆ, ಸಮಾಜಿಕ ಬದ್ಧತೆ ಮೂಡಿಸುವ ನಿಟ್ಟಿನಲ್ಲಿ ಉಲೇಮಾಗಳ ಉಪದೇಶ ಅಗತ್ಯವಾಗಿದೆ ಎಂದು ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಖಾತೆಯ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಪುತ್ತೂರಿನ ಸಾಲ್ಮರದಲ್ಲಿರುವ ಅನ್ಸಾರುದ್ದೀನ್ ಯತೀಂಖಾನದ ವತಿಯಿಂದ ಪರ್ಲಡ್ಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶಾದಿ ಮಹಾಲ್‌ಗೆ ಶಂಕು ಸ್ಥಾಪನಾ ಸಮಾರಂಭದಲ್ಲಿ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.
ಅತ್ಯುತ್ತಮವಾದ ಸಮುದಾಯ ನಿರ್ಮಾಣಕ್ಕೆ ಎಲ್ಲಾ ಧರ್ಮದವರ ಸಹಕಾರ ಅಗತ್ಯವಾಗಿದ್ದು, ಹಿರಿಯರ ಆಶೀರ್ವಾದದೊಂದಿಗೆ ಯುವ ಜನಾಂಗವು ಮುಂದೆ ಬರಬೇಕು. ಅಲ್ಪಸಂಖ್ಯಾತರಿಂದ ಅನ್ಯಾಯವಾದರೆ ಅದರಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಅಪಾಯವಿದೆ. ಅದೇ ರೀತಿ ಬಹು ಸಂಖ್ಯಾತರಿಂದ ಅನ್ಯಾಯ ನಡೆದರೆ ಇಡೀ ದೇಶಕ್ಕೆ ಅಪಾಯವಿದೆ ಎಂದರು.
ವಾಟ್ಸಪ್ ಜಾಲತಾಣಗಳಿಂದ ಕಮ್ಯೂನಿಟಿ ಕಟ್ಟುವ ಬದಲು ಕಮ್ಯುನಲ್ ಘರ್ಷಣೆ ಹೆಚ್ಚಾಗಲಿದೆ ಇಂತಹ ಪಿಡುಗುಗಳ ಬಗ್ಗೆ ಜಾಗರೂಕರಾಗುವುದು ಅಗತ್ಯ ಎಂದರು. ಅಲ್ಪಸಂಖ್ಯಾತ ಕಲ್ಯಾಣಕ್ಕಾಗಿ ಸಿದ್ಧರಾಮಯ್ಯ ಸರಕಾರವು ಅನುದಾನವನ್ನು ರೂ.2ಸಾವಿರ ಕೋಟಿಗೆ ಏರಿಸಿದ್ದು, ಪ್ರತಿಯೊಂದು ಕಡೆ ಶಾದಿ ಮಾಲ್ ನಿರ್ಮಾಣಕ್ಕೆ ರೂ. 50ಲಕ್ಷ ನೀಡುತ್ತಿದ್ದು, ಪರ್ಲಡ್ಕದಲ್ಲಿ ನಿರ್ಮಿಸಲು ಉದ್ಧೇಶಿಸಿರುವ ಶಾದಿಮಹಾಲ್‌ಗೆ ನೀಡಿರುವ ಅನುದಾನವನ್ನು ರೂ. 1ಕೋಟಿಗೆ ಏರಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಸಮಸ್ತ ಕೇರಳ ಮುಶಾವರದ ಉಪಾಧ್ಯಕ್ಷ ಹಾಜಿ ಕೆ.ಪಿ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಅನ್ಸಾರುದ್ದೀನ್ ಯತೀಂಖಾನದ ಅಧ್ಯಕ್ಷ ಕೆ.ಪಿ.ಅಹಮ್ಮದ್ ಹಾಜಿ ಆಕರ್ಷಣ್ ಮಾತನಾಡಿ, ಅನ್ಸಾರುದ್ದೀನ್ ಅನಾಥಾಲಯದ ಮೂಲಕ ಬಡವರ ನಿರ್ಗತಿಕ ಮಕ್ಕಳ ಬಾಳಿಗೆ ಬೆಳಕನ್ನು ನೀಡುವ ಕೆಲಸ ಹಿರಿಯರಿಂದ ಆಗಿದ್ದು, ಈಗಾಗಲೇ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೀಗ ಈ ಸಂಸ್ಥೆಯ ಮೂಲಕ ಪರ್ಲಡ್ಕದಲ್ಲಿ ಸುಸಜ್ಜಿತವಾದ ಶಾದಿಮಹಾಲ್ ಕಟ್ಟಲು ನಿರ್ಧರಿಸಲಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಸಹಾಯವೂ ಬೇಕಾಗಿದೆ ಎಂದರು.
ಎನ್ ಪಿ ಎಂ ಝೈನುಲ್ ಆಬಿದೀನ್ ತಂಳ್ ಕುನ್ಹುಂಗೈ ಕೇರಳ ದುವಾಃಆಶೀರ್ವಚನ ನೀಡಿದರು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ, ಜಿ.ಪಂ ಸದಸ್ಯ ಎಂ.ಎಸ್ ಮಹಮ್ಮದ್, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಯು.ಅಬ್ದುಲ್ಲಾ ಹಾಜಿ, ಜಿಲ್ಲಾ ವಕ್ ಸದಸ್ಯ ಪಿ.ಬಿ. ಹಸನ್ ಹಾಜಿ ಯುನಿಟಿ, ಪರ್ಲಡ್ಕ ಜಮಾಅತ್ ಕಮಿಟಿ ಅಧ್ಯಕ್ಷ ಶಹಾಬಾನ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ, ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಎಸ್‌ಬಿ ಮುಹಮ್ಮದ್ ದಾರಿಮಿ, ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮಿಟಿಯ ಉಪಾಧ್ಯಕ್ಷ ಯಾಕೂಬ್ ಹಾಜಿ ದರ್ಬೆ, ಕಲ್ಲೇಗ ಜುಮಾ ಮಸೀದಿಯ ಅಧ್ಯಕ್ಷ ಕೆ.ಪಿ.ಮುಹಮ್ಮದ್ ಹಾಜಿ ಕಲ್ಲೇಗ, ಪರ್ಲಡ್ಕ ಮಸೀದಿಯ ಖತೀಬ್ ಮುಹಮ್ಮದಅಲಿ ದಾರಿಮಿ, ಶಾಹುಲ್ ಹಮೀದ್ ಮುಸ್ಲಿಯಾರ್, ಇಂಜಿನೀಯರ್ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.
ಅನ್ಸಾರುದ್ದೀನ್ ಅನಾಥಾಲಯದ ಪ್ರಧಾನ ಕಾರ್ಯದರ್ಶಿ ನೂರುದ್ದೀನ್ ಸಾಲ್ಮರ ಸ್ವಾಗತಿಸಿ ವಂದಿಸಿದರು.
ಅಬ್ದುಲ್ ರಹೀಮಾನ್ ಅಝಾದ್, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಅನ್ಸಾರುದ್ದೀನ್ ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಎಲ್.ಟಿ. ಅಬ್ದುಲ್ ರಜಕ್ ಹಾಜಿ, ಲತೀ-್, ಕೆ.ಹೆಚ್. ಖಾಸಿಂ ಹಾಜಿ, ಇಬ್ರಾಹಿಂ ಪರ್ಲಡ್ಕ ಅಬ್ದುಲ್ ರಶೀದ್ ಕೆ.ಎಂ, ಯತೀಮ್ ಖಾನದ ಮೆನೇಜರ್, ಎಸ್.ಎಂ. ಇಸ್ಮಾಯಿಲ್ ನೆಲ್ಯಾಡಿ, ಹಮೀದ್ ಮುಸ್ಲಿಯಾರ್, ಇಸ್ಮಾಯಿಲ್ ಸಾಲ್ಮರ, ಎಂ.ಎ. ಹುಸೈನ್ ಕೆನರಾ, ಹಸನ್ ಮಂಗಲ, , ಹಾಜಿಚ್ಚ ಅನ್ಸಾರುದ್ದೀನ್, ಜಮಾಅತ್ ಕಮಿಟಿಯ ಜೊತೆ ಕಾರ್ಯದರ್ಶಿ ಶೇಖ್ ಜೈನುದ್ದೀನ್, ಕೆ.ವೈ.ಪಿ ಯೂಸುಫ್ ಹಾಜಿ, ಅಬ್ದುಲ್ ಹಮೀದ್ ಸಾಲ್ಮರ, ಉಮ್ಮರ್ ಕರಾವರಳಿ, ಜೈನುದ್ಧಿನ್ ಪರ್ಲಡ್ಕ, ಹಸೈನಾರ್ ಬನಾರಿ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.