ಸಮಗ್ರ ವಲಸೆ ಸುಧಾರಣೆ: ಶ್ವೇತಭವನ
Update: 2017-03-16 21:31 IST
ವಾಶಿಂಗ್ಟನ್, ಮಾ. 16: ಟ್ರಂಪ್ ಆಡಳಿತವು ಸಮಗ್ರ ವಲಸೆ ಸುಧಾರಣೆ ನೀತಿಯೊಂದನ್ನು ಸಿದ್ಧಪಡಿಸುತ್ತಿದೆ ಎಂದು ಶ್ವೇತಭವನ ಬುಧವಾರ ಹೇಳಿದೆ. ಆದರೆ, ಭಾರತೀಯ ಐಟಿ ಉದ್ಯೋಗಿಗಳಲ್ಲಿ ಜನಪ್ರಿಯವಾಗಿರುವ ಎಚ್-1ಬಿ ವೀಸಾ ಕಾರ್ಯಕ್ರಮದಲ್ಲಿ ಬದಲಾವಣೆಗಳನ್ನು ತರಲಾಗುತ್ತದೆಯೇ ಎಂಬುದನ್ನು ಹೇಳಲು ನಿರಾಕರಿಸಿದೆ.
ಎಪ್ರಿಲ್ 3ರೊಳಗೆ ಎಚ್-1ಬಿ ವೀಸಾದಲ್ಲಿ ಬದಲಾವಣೆಗಳನ್ನು ತರುವ ಸಾಧ್ಯತೆ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸಿಯಾನ್ ಸ್ಪೈಸರ್ ಉತ್ತರಿಸುತ್ತಿದ್ದರು.
ಮುಂದಿನ ಹಣಕಾಸು ವರ್ಷಕ್ಕೆ ಎಚ್-1ಬಿ ವೀಸಾಗಳಿಗಾಗಿ ಎಪ್ರಿಲ್ 3ರಿಂದ ಅರ್ಜಿ ಸ್ವೀಕರಿಸಲಾಗುತ್ತದೆ.