ಅಕ್ರಮ ಜಾನುವಾರು ಸಾಗಾಟ: ಓರ್ವನ ಸೆರೆ
Update: 2017-03-16 22:07 IST
ಶಂಕರನಾರಾಯಣ, ಮಾ.16: ಕೊಡ್ಡಾಡಿ ಗ್ರಾಮದ ಮಾರ್ಡಿ ಶಾಲೆಯ ಬಳಿ ಬಾಗಳಕೊಡ್ಲು ಎಂಬಲ್ಲಿ ಮಾ.15ರಂದು ರಾತ್ರಿ 10ಗಂಟೆ ಸುಮಾರಿಗೆ ಮಾರುತಿ ಓಮ್ನಿಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಓರ್ವನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕಾವ್ರಾಡಿ ಗ್ರಾಮದ ಇರ್ಫಾನ್(29) ಎಂದು ಗುರುತಿಸಲಾಗಿದೆ.
ಓಮ್ನಿ ಕಾರು ಸಹಿತ 7 ಜಾನುವಾರುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.