ಉಡುಪಿ: ಮಾ 19ಕ್ಕೆ'ದಲಿತ್‌ವರ್ಲ್ಡ್' ವೆಬ್‌ಸೈಟ್ ಲೋಕಾರ್ಪಣೆ
ಉಡುಪಿ, ಮಾ.16: ದಲಿತ ಸಮಾಜದ ನೋವು-ನಲಿವುಗಳಿಗೆ ಮುಖಾ ಮುಖಿಯಾಗುವ 'ದಲಿತ್ ವರ್ಲ್ಡ್' ವೆಬ್‌ಸೈಟ್‌ನ ಲೋಕಾರ್ಪಣೆ ಕಾರ್ಯಕ್ರಮ ಮಾ.19ರ ರವಿವಾರ ಬೆಳಗ್ಗೆ 10ಗಂಟೆಗೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಿಳಿಸಿದೆ.
ಬೆಳಗ್ಗೆ 10:00 ಗಂಟೆಗೆ ಉಡುಪಿಯ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವೆಬ್‌ಸೈಟ್‌ನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅಧ್ಯಕ್ಷತೆಯನ್ನು ನಾಡಿನ ಹಿರಿಯ ಚಿಂತಕ ಜಿ.ರಾಜ್‌ಶೇಖರ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಾಸನದ ಭೀಮಜ್ಯೋತಿ ಪತ್ರಿಕೆಯ ಸಂಪಾದಕ ಹಾಗೂ ಸಾಮಾಜಿಕ ಹೋರಾಟಗಾರ ನಾಗರಾಜ್ ಹೆತ್ತೂರು, ಉಡುಪಿ ನಗರ ಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಚಿಂತಕ ಕೆ.ಫಣಿರಾಜ್, ಮೊಗವೀರ ಯುವ ಸಂಘಟನೆ ಸ್ಥಾಪಕಾಧ್ಯಕ್ಷ ಸತೀಶ್ ಅಮೀನ್ ಪಡುಕರೆ, ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಮಾಜಿ ನಗರಸಭಾ ಅಧ್ಯಕ್ಷರಾದ ಯುವರಾಜ್ ಹಾಗೂ ದಿನಕರ್ ಶಟ್ಟಿ ಹೆರ್ಗ, ಉದ್ಯಮಿ ದಿನೇಶ್ ಪುತ್ರನ್ ಹಾಗೂ ದಲಿತ ನಾಯಕ ಗಣೇಶ್ ನೆರ್ಗಿ ಭಾಗವಹಿಸಲಿದ್ದಾರೆ.
ರಾಜ್ಯದಲ್ಲೆ ಪ್ರಥಮ ಪ್ರಯತ್ನ ಎನ್ನಬಹುದಾದ ಈ 'ದಲಿತ್‌ವರ್ಲ್ಡ್' ವೆಬೆಸೈಟ್ ಮೂಲಕ ದಲಿತ ಯುವಕ, ಯುವತಿಯರನ್ನು ಅಂಬೇಡ್ಕರ್ ಚಿಂತನೆ ಪರಿಧಿಯೊಳಗೆ ತರುವ ಮುಖ್ಯ ಉದ್ದೇಶವನ್ನು ಹೊಂದಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.