×
Ad

ಕಾನೂನು ಸಚಿವಾಲಯದಿಂದ ಟಿವಿ ಚಾನಲ್!

Update: 2017-03-16 22:45 IST

ಹೊಸದಿಲ್ಲಿ, ಮಾ.16: ದೇಶದ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಟಿವಿ ಚಾನಲ್ ಹೊಂದಿದ ಹೆಗ್ಗಳಿಕೆಗೆ ಕೇಂದ್ರ ಕಾನೂನು ಸಚಿವಾಲಯ ಪಾತ್ರವಾಗಲಿದೆ. ಈ ಚಾನಲ್ ಮುಖ್ಯವಾಗಿ ಪ್ರಮುಖ ವಿಷಯಗಳ ಬಗೆಗಿನ ಚರ್ಚೆಗಳನ್ನು ಪ್ರಸಾರ ಮಾಡಲಿದೆ. ಅಂತೆಯೇ ತಲಾಖ್, ಸಮಾನ ನಾಗರಿಕ ಸಂಹಿತೆ, ಪ್ರಮುಖ ತೀರ್ಪುಗಳು, ಕಾನೂನು ಅರಿವು ತೀವ್ರಗೊಳಿಸುವಂಥ ಚರ್ಚೆಗಳೂ ನಡೆಯಲಿವೆ.

ಈ ಉದ್ದೇಶಕ್ಕಾಗಿ ಸಚಿವಾಲಯ ಪ್ರತ್ಯೇಕ ಚಾನಲ್ ಆರಂಭಿಸಲು ನಿರ್ಧರಿಸಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ, ದೂರಶಿಕ್ಷಣಕ್ಕಾಗಿ 32 ಡಿಟಿಎಚ್ ಟಿವಿ ಚಾನಲ್ ಆರಂಭಿಸಿದ ಹಿನ್ನೆಲೆಯಲ್ಲಿ ಪ್ರತ್ಯೇಕ ಚಾನಲ್‌ಗೆ ಬೇಡಿಕೆ ಮಂಡಿಸಿದೆ.
ಈ ಬಗ್ಗೆ ಕಾರ್ಯಾಚರಣೆಗೆ ಅನುಮತಿ ಕೋರಿ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News