ಅಧಿಕ ಮೊತ್ತಕ್ಕೆ ಏಲಂಗೊಂಡ ಅಂಗಡಿ ಕೋಣೆಗಳು

Update: 2017-03-16 18:46 GMT

ಕಾರ್ಕಳ, ಮಾ.16: ಕಾರ್ಕಳ ಪುರಸಭೆಯು ಈ ಬಾರಿ ಭರ್ಜರಿ ಲಾಭ ಗಳಿಸಿದ್ದು, ಬಸ್ ನಿಲ್ದಾಣ ಬಳಿ ನೂತನವಾಗಿ ನಿರ್ಮಿಸಲಾದ ಮೂರು ಅಂಗಡಿಗಳು ಭರ್ಜರಿ ಮೊತ್ತದಲ್ಲಿ ಗುರುವಾರ ಏಲಂಗೊಂಡಿವೆ. ಕಳೆದ ವಾರವಷ್ಟೇ ದಿನವಹೀ ಮತ್ತು ಮೀನು ಮಾರುಕಟ್ಟೆ ಏಲಂಗೊಂಡಿದ್ದು, ಸೇವಾ ಶುಲ್ಕ ಸೇರಿದಂತೆ ಒಟ್ಟು 18,62,000 ರೂ.ಗೆ ಏಲಂಗೊಂಡಿದೆ.

ಗುರುವಾರ ಬಸ್ ನಿಲ್ದಾಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮೂರು ಅಂಗಡಿ ಕೋಣೆಗಳ ಪೈಕಿ ಮೊದಲ ಅಂಗಡಿ ಕೊಣೆ 76 ಸಾವಿರ ರೂ., ಎರಡನೆ ಅಂಗಡಿ ಕೋಣೆ 78ಸಾವಿರ ರೂ, ಹಾಗೂ ಮೂರನೆ ಅಂಗಡಿ ಕೋಣೆ 1 ಲಕ್ಷ ರೂ, ಗೆ ಏಲಂಗೊಂಡಿದೆ. ದಕ್ಕೆ ಸೇವಾ ಶುಲ್ಕ ಶೇ.15ರಷ್ಟು ಹೆಚ್ಚುವರಿ ಕಟ್ಟಬೇಕಿದೆ.

ಕಟ್ಟಡ ರಚನೆಗೆ ತಗಲಿದ ಖರ್ಚು 50 ಲಕ್ಷ ರೂ: ಗ್ರಾಮ ಕರಣಿಕರ ಹಳೇ ಕಚೇರಿಯನ್ನು ತೆರವುಗೊಳಿಸಿದ ಜಾಗಕ್ಕೆ ಇದೀಗ ಪುರಸಭೆಯು 50 ಲಕ್ಷ ರೂ. ಮೊತ್ತದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿತ್ತು. ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ ಕಟ್ಟಡದ ಮೇಲ್ಛಾವಣಿಯನ್ನು ಕಂದಾಯ ಇಲಾಖೆಗೆ ನೀಡಲಾಗಿದ್ದು, ಕೆಳ ಅಂತಸ್ತಿನಲ್ಲಿರುವ ಮೂರು ಅಂಗಡಿಯನ್ನು ಏಲಂಗೊಳಿಸಲಾಗಿತ್ತು. ಈ ಸಂದರ್ಭ ಒಟ್ಟು 103 ಬಿಡ್ಡುದಾರರು ಭಾಗವಹಿಸಿದ್ದರು.

ಪ್ರಸ್ತುತ ಈ 3 ಅಂಗಡಿಗಳಿಂದ ಪುರಸಭೆಗೆ ಒಟ್ಟು ವಾರ್ಷಿಕ 36,00,000 ರೂ. ಆದಾಯ ಹರಿದು ಬರಲಿದೆ. ಇನ್ನು ಮೂರು ಅಂಗಡಿಗಳು ಬಾಕಿಯಿದ್ದು, ಅದನ್ನು ಈ ಹಿಂದೆ ಬಾಡಿಗೆಗಿದ್ದ ವರ್ತಕರಿಗೆ ಬಾಡಿಗೆ ನಿಗದಿಪಡಿಸಿ ನೀಡಲು ಪುರಸಭೆ ನಿರ್ಧರಿಸಿದೆ.

Writer - ಪುರಸಭೆಗೆ ಬಂಪರ್ ಆದಾಯ...!

contributor

Editor - ಪುರಸಭೆಗೆ ಬಂಪರ್ ಆದಾಯ...!

contributor

Similar News