ತಾಲೂಕು ಏಕೀಕರಣ ಸಮ್ಮೇಳನಾಧ್ಯಕ್ಷರಾಗಿ ಪ್ರಭು
Update: 2017-03-17 00:19 IST
ಮಂಗಳೂರು, ಮಾ.16: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಂಗಳೂರು ಘಟಕದ ಆಶ್ರಯದಲ್ಲಿ ಮಾ.23ರಂದು ಪಡೀಲಿನ ಅಮೃತ ಕಾಲೇಜ್ ಆ್ ಎಜುಕೇಶನ್‌ನಲ್ಲಿ ಮಂಗಳೂರು ತಾಲೂಕು ಏಕೀಕರಣ ಸಮ್ಮೇಳನವನ್ನು ಆಯೋಜಿಸಲಾಗಿದೆ. ಇತಿಹಾಸ ತಜ್ಞ, ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಎಂ.ಆರ್.ಪ್ರಭು ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಸಮ್ಮೇಳನದಲ್ಲಿ ಏಕೀಕರಣದ ಇತಿಹಾಸ ಕುರಿತು ವಿಷಯ ಮಂಡನೆ ಹಾಗೂ ಸಾಧಕ ಶ್ರೇಷ್ಠರಿಗೆ ಗೌರವಾರ್ಪಣೆ ಸಲ್ಲಿಸಲಾಗುವುದು ಎಂದು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.