ನಾಳೆ ‘ಉತ್ತರಕಾಂಡ’ ಕಾದಂಬರಿ ಸಮೀಕ್ಷೆ-ಸಂವಾದ
Update: 2017-03-17 00:22 IST
ಉಡುಪಿ, ಮಾ.16: ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು ಉಡುಪಿ ಮತ್ತು ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ಆಶ್ರಯದಲ್ಲಿ ಎಸ್.ಎಲ್. ಭೈರಪ್ಪಅವರ ಕಾದಂಬರಿ ‘ಉತ್ತರಕಾಂಡ’ದ ಸಮೀಕ್ಷೆ-ಸಂವಾದ ಮಾ.18ರ ಸಂಜೆ 4ಕ್ಕೆ ಉಡುಪಿ ಗೋವಿಂದ ಪೈ ಸಂಶೋಧನಾ ಕೇಂದ್ರ ಧ್ವನ್ಯಾ ಲೋಕದಲ್ಲಿ ನಡೆಯಲಿದೆ. ಪ್ರೊ.ಎಂ.ಎಲ್.ಸಾಮಗ ಅಧ್ಯಕ್ಷತೆ ವಹಿಸುವರು. ಡಾ.ಮಹೇಶ್ವರಿ ಕಾಸರಗೋಡು ಮತ್ತು ಡಾ. ನಿಕೇತನ ಉಡುಪಿ ಕಾದಂಬರಿಯ ಸಮೀಕ್ಷೆ ಮಾಡಲಿರುವರು ಎಂದು ಪ್ರಕಟನೆ ತಿಳಿಸಿದೆ.