ತಾಜ್ ಸೈಕಲ್ ಕಂಪೆನಿಯ 4ನೆ ಶೋರೂಂ ಉದ್ಘಾಟನೆ

Update: 2017-03-17 05:59 GMT

ಮಂಗಳೂರು, ಮಾ.17: ತಾಜ್ ಸೈಕಲ್ ಕಂಪೆನಿಯು ಬೋಳಾರ ರಸ್ತೆಯ ಹೊಯ್ಗೆ ಬಜಾರ್‌ನಲ್ಲಿ ಆರಂಭಿಸಿದ 4ನೆ ಶೋರೂಂ ಹಾಗೂ ರಖಂ ವ್ಯಾಪಾರ ಮಳಿಗೆ ಇತ್ತೀಚೆಗೆ ಉದ್ಘಾಟನೆಗೊಂಡಿತು.

ಶಾಸಕ ಜೆ.ಆರ್.ಲೋಬೊ ಅವರು ನೂತನ ಶೋರೂಂ ಅನ್ನು ಉದ್ಘಾಟಿಸಿದರು. ಮುಖ್ಯ ಅಥಿತಿಗಳಾಗಿ ಮನಪಾ ಸದಸ್ಯೆ ಹಾಗೂ ಮಾಜಿ ಉಪ ಮೇಯರ್ ಕವಿತಾ ವಾಸು ಹಾಗೂ ಸದಸ್ಯ ಅಬ್ದುಲ್ ಲತೀಫ್ ಭಾಗವಹಿಸಿದ್ದರು. ಈ ಸಂದರ್ಭ ಕಂಪೆನಿಯ ಮಾಲಕ ಎಸ್.ಎಂ. ಮುತಲಿಬ್, ಅವರ ಪುತ್ರ ಶೇಖ್ ಇಸ್ಮಾಯಿಲ್ ಮುಬೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News