ಮಂಗಳೂರು ವಿ.ವಿ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ: ಆಳ್ವಾಸ್‌ಗೆ ಸತತ 13ನೆ ಬಾರಿ ಸಮಗ್ರ ಪ್ರಶಸ್ತಿ
ಮೂಡುಬಿದಿರೆ, ಮಾ.17: ಮಂಗಳೂರು ವಿ.ವಿ. ಅಂತರ್ ಕಾಲೇಜು ಸಾಂಸ್ಕೃತಿಕ ಯುವಜನೋತ್ಸವದ ಎಲ್ಲ ಐದು ವಿಭಾಗಗಳಲ್ಲಿ ಗರಿಷ್ಠ ಪ್ರಶಸ್ತಿಗಳನ್ನು ಪಡೆಯುವುದರೊಂದಿಗೆ ಆಳ್ವಾಸ್ ಕಾಲೇಜು ತಂಡ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಸಮೂಹ ವಿಭಾಗದ ಜಾನಪದ ವಾದ್ಯಗೋಷ್ಠಿ, ಬಾರತೀಯ ಗೀತೆ, ಪಾಶ್ಚತ್ಯ ಸಂಗೀತ, ಏಕಾಂಕ ನಾಟಕ, ಪ್ರಹಸನ ಜಾನಪದ ನೃತ್ಯದಲ್ಲಿ ಆಳ್ವಾಸ್ ಪ್ರಥಮ ಸ್ಥಾನಿಯಾಗಿದೆ. ಆಳ್ವಾಸ್‌ನ ಮನಸ್ವಿ (ಮಿಮಿಕ್ರಿ), ವಿಘ್ನೇಶ್ ಪ್ರಭು(ತಬಲ ವಾದ್ಯ), ಚಾರ್ಲ್ಸ್(ಪಾಶ್ಚತ್ಯ ಸಂಗೀತ), ವರ್ಷಾ ಆಚಾರ್ಯ(ಲಘು ಸಂಗೀತ), ಆಯನಾ(ಇಂಗ್ಲಿಷ್ ಭಾಷಣ), ಕಾರ್ತಿಕ್ ಪ್ರಭು(ಛಾಯಾಚಿತ್ರ), ಅಕ್ಷಯ್(ಕ್ಲೇ ಮಾಡಲಿಂಗ್), ಕಿರಣ್(ಪೋಸ್ಟರ್ ಮೇಕಿಂಗ್), ನವೀನ್(ಕಾರ್ಟೂನಿಂಗ್), ಕಾರ್ತಿಕ್ ಆಚಾರ್ಯ(ಒನ್ ದಿ ಸ್ಪಾಟ್ ಪೈಟಿಂಗ್) ಪ್ರಥಮ ಬಹುಮಾನಗಳನ್ನು ಗಳಿಸಿದ್ದಾರೆ.
ನಿತೇಶ್ ಹಾಗೂ ಪ್ರೇಮ್‌ಸಾಗರ್ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. ನಿಧಿ(ಇಂಗ್ಲಿಷ್ ಚರ್ಚಾ ಸ್ಪರ್ಧೆ), ಆದರ್ಶ್ ಹಾಗೂ ಕಾರ್ತಿಕ್(ರಸಪ್ರಶ್ನೆ), ಮಾನಸಾ(ವೈಯಕ್ತಿಕ ಶಾಸ್ತ್ರೀಯ ಸಂಗೀತ) ಮಯೂರ್(ಹಾರ್ಮೋನಿಯಂ) ದ್ವಿತೀಯ ಸ್ಥಾನಿಯಾದರೆ, ರಕ್ಷಾ(ರಂಗೋಲಿ), ಮಧುರಾ ಕಾರಂತ್ (ವೈಯಕ್ತಿಕ ಶಾಸ್ತ್ರೀಯ ನೃತ್ಯ) ತೃತೀಯ ಸ್ಥಾನ ಗಳಿಸಿದ್ದಾರೆ.
ಗುಂಪು ವಿಭಾಗದಲ್ಲಿ ಮೂಕಾಭಿನಯಾ ತೃತೀಯ ಸ್ಥಾನ ಗಳಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.