ತಮ್ಮನ್ನು ಪ್ರಧಾನಿ ಅಭ್ಯರ್ಥಿ ಮಾಡಬೇಕೆನ್ನುವ ಅಭಿಯಾನದ ಕುರಿತು ಮೌನ ಮುರಿದ ಶಶಿ ತರೂರ್ ಹೇಳಿದ್ದೇನು ?

Update: 2017-03-17 10:33 GMT

ಹೊಸದಿಲ್ಲಿ, ಮಾ.17 : ತಮ್ಮನ್ನು ಪ್ರಧಾನಿ ಅಭ್ಯರ್ಥಿ ಮಾಡಬೇಕೆನ್ನುವ ಆನ್ ಲೈನ್ ಅಭಿಯಾನ ವೈರಲ್ ಆಗುತ್ತಿದ್ದಂತೆಯೇ ಮೌನ ಮುರಿದಿರುವ ಸಂಸದ ಶಶಿ ತರೂರ್, ಶುಕ್ರವಾರ ತಮ್ಮ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಈ ಅಭಿಯಾನ ತಿರುವನಂತಪುರಂ ನಿವಾಸಿಯೊಬ್ಬರಿಂದ ಆರಂಭವಾಗಿದ್ದರೆ, ಈಗಾಗಲೇ ಅದಕ್ಕೆ 16,000ಕ್ಕೂ ಹೆಚ್ಚು ಸಹಿಗಳು ದೊರಕಿವೆ. ತಮ್ಮ ಮೇಲೆ ಜನರಿಟ್ಟಿರುವ ಪ್ರೀತಿಗೆ ತಾವು ಅಭಾರಿ ಎಂದು ಹೇಳಿದ ತರೂರ್, ಅದೇ ಸಮಯ ಈ ಅಭಿಯಾನ ಆರಂಭಿಸಿದವರನ್ನು ಅದನ್ನು ಹಿಂದೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.

‘‘ನಾನೊಬ್ಬ ಕಾಂಗ್ರೆಸ್ ಪಕ್ಷದ ಸಂಸದ. ಅದಕ್ಕಿಂತ ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ. ಪಕ್ಷಕ್ಕೆ ಅದರದೇ ಆದ ನಾಯಕತ್ವವಿದೆ ಹಾಗೂ ಇದರಲ್ಲಿ ಚರ್ಚೆಗೆ ಆಸ್ಪದವಿಲ್ಲ. ಬದಲಾವಣೆಗಳು ನಡೆಯುವಾಗ ಅವುಗಳು ಒಂದು ಪೂರ್ವನಿರ್ಧರಿತ ಪ್ರಕ್ರಿಯೆಯಂತೆ ನಡೆಯುತ್ತವೆ’’ ಎಂದು ತರೂರ್ ಬರೆದಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕರೂ ಆಗಿರುವ ತರೂರ್ ಈಗಾಗಲೇ ತಮ್ಮ ಲೇಟೆಸ್ಟ್ ಕೃತಿ ‘‘ಎನ್ ಎರಾ ಆಫ್ ಡಾರ್ಕ್ ನೆಸ್: ದಿ ಬ್ರಿಟಿಷ್ ಎಂಪೈರ್ ಇನ್ ಇಂಡಿಯಾ’’ ಮೂಲಕ ಸಾಕಷ್ಟು ಸುದ್ದಿಯಲ್ಲಿದ್ದಾರೆ ಹಾಗೂ ಈ ಬಗೆಗಿನ ಚರ್ಚೆಗಳಲ್ಲಿಯೂ ಭಾಗವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ಕೃತಿಯು ಚರ್ಚೆಗೊಳಗಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News