ಕಲಾಭವನ್ ಮಣಿ ದೇಹದಲ್ಲಿ ಕೀಟನಾಶಕ ಪತ್ತೆಯಾಗಿಲ್ಲ: ಪೊಲೀಸರು

Update: 2017-03-17 11:16 GMT

ಕೊಚ್ಚಿ,ಮಾ. 17: ಕಲಾಭವನ್ ಮಣಿಯ ಸಾವು ಕೊಲೆಯೆಂದು ಸಂಶಹಿಸುವ ಪುರಾವೆಗಳು ಸಿಕ್ಕಿಲ್ಲ ಎಂದು ಪೊಲೀಸರುಕೇರಳ ಹೈಕೋರ್ಟಿಗೆ ತಿಳಿಸಿದ್ದಾರೆ.

   ಹೈದರಾಬಾದ್‌ನ ಕೇಂದ್ರ ವಿಧಿ ವಿಜ್ಞಾನ ಪ್ರಯೋಗಲಯದಲ್ಲಿ ನಡೆಸಲಾದ ರಕ್ತಪರೀಕ್ಷೆಯಲ್ಲಿ ವಿಷ ಮದ್ಯ(ಮಿಥೈಲ್ ಆಲ್ಕೊಹಾಲ್) ಅಂಶ ಮಾತ್ರ ಕಂಡು ಬಂದಿದೆ. ಕೀಟನಾಶಕ ಅಂಶ ಪತ್ತೆಯಾಗಿಲ್ಲ. ಕಲಾಭವನ್ ಮಣಿಸಾವು ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಬೇಕೆಂದು ಸಹೋದರ ರಾಮಕೃಷ್ಣನ್ ಆಗ್ರಹಿಸಿ ಹೈಕೋರ್ಟಿಗೆ ಸಲ್ಲಿಸಿದ್ದಾರೆ. ಆದರೆ ಪೊಲೀಸಧಿಕಾರಿಗಳು ಹೈಕೋರ್ಟಿಗೆ ಮಣಿ ಸಾವಿನ ತನಿಖೆಯ ಪ್ರಗತಿಯನ್ನು ಈ ರೀತಿ ತಿಳಿಸಿದ್ದಾರೆ.

 ಮಣಿಯ ಶರೀರದಲ್ಲಿ ವಿಷ ಮದ್ಯ ಜೊತೆಗೆ ಕ್ಲಾರ್‌ಪೈಪರೀಸ್ ಎನ್ನುವ ಕೀಟನಾಶಕ ಕೂಡಾ ಇತ್ತೆಂದು ಎರ್ನಾಕುಲಂನಲ್ಲಿರುವ ರೀಜನಲ್ ಲ್ಯಾಬ್ ವರದಿ ತಿಳಿಸಿತ್ತು. ಮಣಿ 2016 ಮಾರ್ಚ್ ಆರರಂದು ನಿಧನರಾಗಿದ್ದರು. ಕಿಡ್ನಿ ಫೈಲೂರ್, ಸಿಹಿಮೂತತ್ರ ರೋಗ ಇದ್ದವು. ಇದು ಉಲ್ಬಣಿಸಿದ್ದುಸಾವಿಗೆ ಕಾರಣವಾಗಿದೆಯೇ ಎಂದು ಕೂಡಾ ತಪಾಸಣೆ ನಡೆಯುತ್ತಿದೆ. ಮಣಿಯ ಆರ್ಥಿಕ ವ್ಯವಹಾರಗಳನ್ನು ಪರಿಶೀಲಿಸಿ ನೋಡಲಾಗಿದೆ. ಆದರೆ ಮಣಿಯ ಕೊಲೆ ನಡೆದಿದೆಎಂದು ಸೂಚಿಸು ಸಾಕ್ಷ್ಯಗಳು ಸಿಕ್ಕಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News