ಎಚ್-1ಬಿ ವೀಸಾಗಳ ಪ್ರೀಮಿಯಂ ಸಂಸ್ಕರಣೆ ಸ್ಥಗಿತ

Update: 2017-03-17 13:49 GMT

ವಾಶಿಂಗ್ಟನ್, ಮಾ. 17: ಭಾರತೀಯ ಐಟಿ ಕಂಪೆನಿಗಳು ಮತ್ತು ಉದ್ಯೋಗಿಗಳಲ್ಲಿ ಜನಪ್ರಿಯವಾಗಿರುವ ಎಚ್-1ಬಿ ವೀಸಾಗಳ ಪ್ರೀಮಿಯಂ ಸಂಸ್ಕರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಅಮೆರಿಕ ಶುಕ್ರವಾರ ಹೇಳಿದೆ.

ಎಪ್ರಿಲ್ ಮೊದಲ ವಾರದಲ್ಲಿ ಈ ವೀಸಾಗಳಿಗಾಗಿ ಬರುವ ಭಾರೀ ಪ್ರಮಾಣದ ಅರ್ಜಿಗಳನ್ನು ನಿಭಾಯಿಸುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದಿದೆ.

‘‘ ‘ಎಚ್-1ಬಿ’ ವೀಸಾ ಕಾರ್ಯಕ್ರಮವನ್ನು ನಿಲ್ಲಿಸಲಾಗಿಲ್ಲ. ಅದರ ಪ್ರೀಮಿಯಂ ಸಂಸ್ಕರಣೆಯನ್ನು ಮಾತ್ರ ನಿಲ್ಲಿಸಲಾಗಿದೆ. ಪ್ರೀಮಿಯಂ ಸಂಸ್ಕರಣೆಯಡಿಯಲ್ಲಿ ನಾವು 15 ದಿನಗಳಲ್ಲಿ ಅರ್ಜಿಯನ್ನು ಸಂಸ್ಕರಿಸಬೇಕಾಗುತ್ತದೆ’’ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ (ಯುಎಸ್‌ಸಿಐಎಸ್) ಉಸ್ತುವಾರಿ ನಿರ್ದೇಶಕಿ ಲೋರಿ ಸಯಲ್ಯಾಬ ಹೇಳಿದರು.

ಅವರು ಆಂತರಿಕ ಭದ್ರತೆ ಇಲಾಖೆಯ ಸದನ ಉಪಸಮಿತಿ ಸದಸ್ಯರಿಗೆ ವೀಸಾ ನಿರ್ವಹಣೆ ಬಗ್ಗೆ ವಿವರಣೆಗಳನ್ನು ನೀಡುತ್ತಿದ್ದರು.2018ರ ಆರ್ಥಿಕ ವರ್ಷಕ್ಕಾಗಿ ಅಮೆರಿಕವು ಎಪ್ರಿಲ್ 3ರಿಂದ ಎಚ್-1ಬಿ ಉದ್ಯೋಗ ವೀಸಾಗಳಿಗಾಗಿ ಅರ್ಜಿಗಳನ್ನು ಸ್ವೀಕರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News