×
Ad

ಮಂಗಳೂರು: ಎಸ್‌ಕೆಎಫ್ ಎಲಿಕ್ಸರ್ ಸಂಸ್ಥೆಯಿಂದ ವಾಟರ್ ಪ್ಯೂರಿಫೈಯರ್ ಬಿಡುಗಡೆ

Update: 2017-03-17 21:22 IST

ಮಂಗಳೂರು, ಮಾ. 17: ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ. ಲಿ ಸಂಸ್ಥೆಯಿಂದ ವಾಟರ್ ಪ್ಯೂರಿಫೈಯರ್ (ಡಿಸ್ಪೆನ್ಸರ್ಸ್‌/ಫಿಲ್ಲಿಂಗ್ ಕೌಂಟರ್)ಗಳ ಸಂಪೂರ್ಣ ಶ್ರೇಣಿ (ಡೊಮೆಸ್ಟಿಕ್, ಇನ್‌ಸ್ಟಿಟ್ಯೂಶನ್ ಹಾಗೂ ಕಮರ್ಶಿಲ್) ಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಗ್ರಾಹಕರು ಈ ವಾಟರ್ ಪ್ಯೂರಿಫೈಯರ್ಗಳಿಂದ ತಮ್ಮದೇ ಜಲಮೂಲಗಳಿಂದ ಮಿತದರದಲ್ಲಿ ಶುದ್ಧ ಕುಡಿಯುವ ನೀರನ್ನು ಪಡೆಯಬಹುದು ಎಂದು ಸಂಸ್ಥೆಯ ಅಧ್ಯಕ್ಷ ರಾಮಕೃಷ್ಣ ಆಚಾರ್ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲಿಕ್ಸರ್ ಆರ್‌ಒ/ಯುವಿ/ಯುಎಫ್/ಟಿಡಿಎಸ್ ಕಂಟ್ರೋಲ್ ತಂತ್ರಜ್ಞಾನವು ನೀರಿನಲ್ಲಿರುವ ಕಶ್ಮಲಗಳನ್ನೆಲ್ಲಾ ನಿವಾರಿಸಿ ನೀರಿನ ಟಿಡಿಎಸ್, ಪಿಎಚ್ ಮಟ್ಟವನ್ನು ಸಹಜ ಖನಿಜಯುಕ್ತ ನೀರಿನ ಮಟ್ಟಕ್ಕೆ ತಂದು ತಮ್ಮದೇ ಜಲಮೂಲದಿಂದ (ಬಾವಿ, ಬೋರ್‌ವೆಲ್, ಕಾರ್ಪೊರೇಶನ್ ವಾಟರ್) ಶೇ. 100 ಪರಿಶುದ್ಧ ಕುಡಿಯುವ ನೀರನ್ನು ಗ್ರಾಹಕರಿಗೆ ಒದಗಿಸುತ್ತದೆ ಎಂದರು.

 ಬಾಟಲಿ ನೀರನ್ನು ಖರೀದಿಸಿ ನೀರನ್ನು ಉಪಯೋಗಿಸಿದ ಬಳಿಕ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇಂತಹ ವಾಟರ್ ಪ್ಯೂರಿಫೈಯರ್ ಫಿಲ್ಲಿಂಗ್ ಕೌಂಟರ್‌ನ್ನು ಅಳವಡಿಸಿ ಈ ಮೂಲಕ ನಮ್ಮ ಪರಿಸರವು ಪ್ಲಾಸ್ಟಿಕ್ ಬಾಟಲಿಗಳಿಂದ ಕಲುಷಿತವಾಗುವುದನ್ನು ತಡೆಯಬಹುದು. ಮನೆ, ಕಚೇರಿ, ಶಾಲೆ, ಕಾಲೇಜು, ಹಾಸ್ಟೆಲ್, ಆಸ್ಪತ್ರೆ, ಹೊಟೇಲ್, ಉದ್ಯಮ ಹಾಗೂ ಸಾರ್ವಜನಿಕ ಸ್ಥಳಗಳು ಇತ್ಯಾದಿಗಳಿಗೆ ಸೂಕ್ತವಾದ ಮಾದರಿಗಳ ಸಂಪೂರ್ಣ ಶ್ರೇಣಿ ಎಲಿಕ್ಸರ್‌ನಲ್ಲಿ ಲಭ್ಯವಿದೆ. ಜನರಿಗೆ ತಮಗೆ ಬೇಕಾದಲ್ಲಿ ಕೊಂಡೊಯ್ದು ಉಪಯೋಗಿಸಲು, ತಮ್ಮದೇ ಪ್ಲಾಸ್ಟಿಕೇತರ (ತಾಮ್ರ, ಸ್ಟೀಲ್) ಬಾಟ್ಲ್, ಫ್ಲಾಸ್ಕ್‌ಗಳಲ್ಲಿ ತುಂಬಿಸಲು ಶುದ್ಧ ಮಿನರಲ್ ನೀರನ್ನೊದಗಿಸುವ ಮಿನರಲ್ ವಾಟರ್ ಫಿಲ್ಲಿಂಗ್ ಕೌಂಟರ್‌ಗಳು ಇಂದು ಅತ್ಯಂತ ಅಗತ್ಯ.

ಇದೀಗ ನಮ್ಮ ದಶಕಗಳ ವಿಶಾಲ ಅನುಭವವನ್ನು ಸದುಪಯೋಗ ಪಡಿಸಿ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗಳಿಗಾಗಿ ಬಂಡವಾಳ ಹಾಕಿ, ಎಲಿಕ್ಸರ್ ಬ್ರ್ಯಾಂಡ್‌ನ ವಾಟರ್ ಪ್ಯೂರಿಫೈಯರ್ಗಳನ್ನು ವಿನ್ಯಾಸಗೊಳಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದೇವೆ. ಜನರಿಗೆ ಕೈಗೆಟಕುವ ಬೆಲೆಗೆ ಶುದ್ಧ ಮಿನರಲ್ ಕುಡಿಯುವ ನೀರನ್ನು ಒದಗಿಸುವುದು ನಮ್ಮ ಧ್ಯೇಯವಾಗಿದೆ ಎಂದು ರಾಮಕೃಷ್ಣ ಆಚಾರ್ ವಿವರಿಸಿದರು.

ನಮ್ಮ ಯಂತ್ರಗಳು 18 ದೇಶಗಳಿಗೆ ರಫ್ತಾಗಿದ್ದು ಇತ್ತೀಚೆಗೆ ಮಧ್ಯ ಅಮೆರಿಕ ಭೂಖಂಡದ ಕೋಸ್ಟಾರಿಕ ದೇಶಕ್ಕೆ ಕೂಡ ರಫ್ತಾಗಿದೆ. ನಮ್ಮ ಯಂತ್ರಗಳ ನೂತನ ವಿನ್ಯಾಸ ಮತ್ತು ತಾಂತ್ರಿಕ ಕ್ಷಮತೆಗಳಿಂದಾಗಿ ಧಾನ್ಯಗಳ ಉಳಿಕೆ, ವಿದ್ಯುತ್ ಇಂಧನಗಳ ಉಳಿಕೆಗಳಿಂದಾಗಿ ದೇಶಕ್ಕೆ ಪ್ರತೀ ವರ್ಷ 60 ಮಿಲಿಯದಷ್ಟು ಲಾಭವಾಗಿದೆ ಎಂದವರು ಹೇಳಿದರು.

 ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಪ್ರಜ್ವಲ್, ವಾಣಿಜ್ಯ ವಿಭಾಗ ನಿರ್ದೇಶಕ ರಾಮ್‌ದಾಸ್ ಪ್ರಭು, ತಾಂತ್ರಿಕ ಮುಖ್ಯಸ್ಥ ವಿಜೇತ್ ಜೈನ್, ಪ್ರಾಂತೀಯ ವ್ಯವಸ್ಥಾಪಕ ಅಮೀರ್ ಹಂಝ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News