ಬಂಟ್ವಾಳ: ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ 16 ದೋಣಿ ವಶ
Update: 2017-03-17 22:41 IST
ಬಂಟ್ವಾಳ, ಮಾ.17: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬರಿಮಾರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆಯ ಅಡ್ಡಕ್ಕೆ ಬಂಟ್ವಾಳ ಪೊಲೀಸರು ದಾಳಿ ನಡೆಸಿದರು.
ಈ ದಾಳಿಯ ಸಂದರ್ಭ ಸುಮಾರು 20 ಲೋಡ್ ನಷ್ಟು ಮರಳು ಹಾಗೂ ಗಣಿಗಾರಿಕೆಗೆ ಉಪಯೋಗಿಸಿದ್ದ ಸುಮಾರು 16 ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.