ಬಸ್ಸಿಗೆ ಕಲ್ಲೆಸೆದ ಪ್ರಕರಣ: ಮತ್ತಿಬ್ಬರ ಬಂಧನ
Update: 2017-03-17 23:34 IST
ಮಂಗಳೂರು, ಮಾ. 17: ಕಳೆದ ಫೆ.. 25ರಂದು ದ.ಕ. ಜಿಲ್ಲೆಯಲ್ಲಿ ಹರತಾಳ ಆಚರಣೆಯ ಸಂದರ್ಭದಲ್ಲಿ ಬಸ್ಸುಗಳಿಗೆ ಮತ್ತು ಪೊಲೀಸ್ ವಾಹನಕ್ಕೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶಕ್ತಿನಗರದ ಅಕ್ಷಯ್ (23) ಮತ್ತು ಮಂಜೇಶ್ವರ ಮೂಲದ ಶಕ್ತಿನಗರದ ನಿವಾಸಿ ಅವಿನಾಶ್ (20) ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.