ಕೃಷಿಸಾಲ ಮರುಪಾವತಿ ಅವವಿಸ್ತರಣೆಗೆ ಡಾ.ರಾಜೇಂದ್ರ ಕುಮಾರ್ ಮನವಿ

Update: 2017-03-17 18:27 GMT

ಮಂಗಳೂರು, ಮಾ.17: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರೈತರ ರಕ್ಷಣೆಗಾಗಿ ಕೃಷಿ ಸಾಲಗಳ ಮರುಪಾವತಿ ಅವಯನ್ನು 2017ನೆ ಎಪ್ರಿಲ್ ಅಂತ್ಯದವರೆಗೆ ವಿಸ್ತರಣೆ ಮಾಡುವಂತೆ ಮುಖ್ಯಮಂತ್ರಿಯವರಲ್ಲಿ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮನವಿ ಮಾಡಿದ್ದಾರೆ.

 ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಕಾರ್ಯವ್ಯಾಪ್ತಿ ಯಲ್ಲಿರುವ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಒಟ್ಟು 167 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ 92,748 ರೈತ ಸದಸ್ಯರು ಅಲ್ಪಾವಬೆಳೆ ಸಾಲವನ್ನು ಮತ್ತು 49,689 ರೈತ ಸದಸ್ಯರು ಮಧ್ಯಮಾವಸಾಲವನ್ನು ಪಡೆದಿದ್ದಾರೆ. ಈ ಪೈಕಿ 5,117 ಜನ ರೈತ ಸದಸ್ಯರಿಂದ ಒಟ್ಟು 2037.18 ಲಕ್ಷ ರೂ. ಕೃಷಿ ಸಾಲ ವಸೂಲಾಗದೆ ಪ್ರಸ್ತುತ ಸುಸ್ತಿ ಬಾಕಿಯಾಗಿದೆ.

ರಾಜ್ಯದಲ್ಲಿ 2016ನೆ ಸಾಲಿನ ಮುಂಗಾರು ಮತ್ತು ಹಿಂಗಾರು ಮಳೆಯಾಗದೆ ತೀವ್ರ ಬರಗಾಲ ಉಂಟಾಗಿದೆ. ಇದರಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡು ಬೆಳೆ ನಾಶವಾಗಿದೆ. ಹೀಗೆ ಕೃಷಿ ಉತ್ಪನ್ನವಿಲ್ಲದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೆಲವು ರೈತರು ಜೀವನದಲ್ಲಿ ಭರವಸೆ ಕಳೆದುಕೊಂಡು ಹತಾಶರಾಗಿ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಉಂಟಾಗಿದೆ.

ಈಗಾಗಲೇ ರಾಜ್ಯ ಸರಕಾರ ಕೃಷಿ ಸಾಲದ ಮೇಲಿನ ಬಡ್ಡಿ ಸಹಾಯಧನ ನೀಡಿ ರಾಜ್ಯದ ರೈತರಿಗೆ ಆರ್ಥಿಕ ನೆರವು ನೀಡುತ್ತಿದೆ. ಆದರೆ ಬರಗಾಲದಿಂದಾಗಿ ರೈತರು ತಮ್ಮ ಸಾಲವನ್ನು ಮರುಪಾವತಿ ದಿನಾಂಕ(due date)ದೊಳಗೆ ಪಾವತಿಸಲು ಸಾಧ್ಯವಾಗದೆ ಅನಿವಾರ್ಯವಾಗಿ ಸುಸ್ತಿದಾರರಾಗುವುದರಿಂದ ರಾಜ್ಯ ಸರಕಾರ ನೀಡುತ್ತಿರುವ ಬಡ್ಡಿ ಸಹಾಯಧನದ ಪ್ರಯೋಜನದಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ಸಾಲಗಳ ಮರುಪಾವತಿ ಅವಯನ್ನು 2017ನೆ ಎಪ್ರಿಲ್ ತಿಂಗಳ ಅಂತ್ಯದವರೆಗೆ ಕಾಲ ವಿಸ್ತರಣೆ ಮಾಡಿ ಬಡ್ಡಿ ರಿಯಾಯಿತಿ ಯೋಜನೆಯ ಲವನ್ನು ರೈತರಿಗೆ ನೀಡುವಂತೆ ರಾಜೇಂದ್ರ ಕುಮಾರ್ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News