ಉಡುಪಿ: ಚಿನ್ನದ ವ್ಯಾಪಾರಿಯಿಂದ ಲಕ್ಷಾಂತರ ಮೌಲ್ಯದ ನಗ-ನಗದು ದರೋಡೆ
Update: 2017-03-18 12:04 IST
ಉಡುಪಿ, ಮಾ.18: ಚಿನ್ನದ ವ್ಯಾಪಾರಿಯೊಬ್ಬರನ್ನು ಬಲವಂತವಾಗಿ ಕರೆದೊಯ್ದು ಲಕ್ಷಾಂತರ ರೂ. ವೌಲ್ಯದ ನಗ-ನಗದು ದರೋಡೆಗೈದ ಘಟನೆ ನಿನ್ನೆ ರಾತ್ರಿ ಮಣಿಪಾಲ ಸಮೀಪದ ಈಶ್ವರ ನಗರದಲ್ಲಿ ನಡೆದಿರುವುದು ವರದಿಯಾಗಿದೆ.
ಕೇರಳದ ತ್ರಿಶೂರ್ ನಿವಾಸಿ ದಿಲೀಪ್ ದರೋಡೆಗೊಳಗಾದ ವ್ಯಾಪಾರಿ. ಇವರಲ್ಲಿದ್ದ ನಲವತ್ತು ಲಕ್ಷ ರೂ. ಮೌಲ್ಯದ ಚಿನ್ನ, ಎರಡೂವರೆ ಲಕ್ಷ ರೂ. ನಗದನ್ನು ದುಷ್ಕರ್ಮಿಗಳು ದರೋಡೆಗೈದಿದ್ದಾರೆ.
ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ದಿಲೀಪ್ ಅವರನ್ನು ಬಸ್ಸಿನಿಂದ ಕೆಳಗಿಳಿಸಿ ಕಾರಿನಲ್ಲಿ ಕರೆದೊಯ್ದು ಈ ಕೃತ್ಯ ಎಸಗಲಾಗಿದೆ. ಬಳಿಕ ದಿಲೀಪ್ ಅವರನ್ನು ಪಡುಬಿದ್ರೆಯಲ್ಲಿ ಬಿಟ್ಟು ದರೋಡೆಕೋರರು ಪರಾರಿಯಾಗಿದ್ದಾರೆ.
ಘಟನೆಯ ಬಗ್ಗೆ ದಿಲೀಪ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.